ಮಾಕೋಡು ಗಂಗೂರಿನಲ್ಲಿ ಸಾರಿಗೆ ಬಸ್ ಸಂಚಾರಕ್ಕೆ ನಿತಿನ್ ವೆಂಕಟೇಶ್ ಚಾಲನೆ ನೀಡಿದರು. ರಾಮಚಂದ್ರ ದರ್ಶನ್, ಕೃಷ್ಣೆಗೌಡ, ಗಂಗಮ್ಮ, ಜಯಣ್ಣ, ಲೋಹಿತ್ ಪಂಚವಳ್ಳಿ, ಲೋಕೇಶ್, ಪ್ರೇಮ್‌ಕುಮಾರ್ ಇದ್ದರು.
ರಾವಂದೂರು: ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ನೂತನ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ಘಟಕದಿಂದ ನೂತನ ಬಸ್ ಸಂಚಾರಕ್ಕೆ ಮಾಕೋಡು ಗಂಗೂರಿನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಬಸ್ ಸಂಚಾರವಿಲ್ಲದೆ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಸಚಿವ ಕೆ.ವೆಂಕಟೇಶ್ ಅವರ ಆದೇಶದನ್ವಯ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪಿರಿಯಾಪಟ್ಟಣ ಘಟಕ ಸಾರಿಗೆ ವ್ಯವಸ್ಥಾಪಕ ರಾಮಚಂದ್ರ ದರ್ಶನ್ ಮಾತನಾಡಿ, ಮಾರ್ಗ 60ರ ಬಸ್ ಪಿರಿಯಾಪಟ್ಟಣದಿಂದ ಹೊರಟು ಬೆಟ್ಟದಪುರ, ಕೊತ್ವವಳ್ಳಿ, ರಾವಂದೂರು, ಶೆಟ್ಟಿಹಳ್ಳಿ, ಗಂಗೂರು, ಮಕೋಡು, ಹುಣಸೂರು, ಮೈಸೂರು ಮಾರ್ಗವಾಗಿ ಸಂಚರಿಸಿ ಮತ್ತೆ ಪಿರಿಯಾಪಟ್ಟಣಕ್ಕೆ ಬರಲಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣೆಗೌಡ, ಸದಸ್ಯ ಗಂಗಮ್ಮ, ಜಯಣ್ಣ, ಲೋಹಿತ್ ಪಂಚವಳ್ಳಿ, ಲೋಕೇಶ್, ಪ್ರೇಮ್‌ಕುಮಾರ್, ಸ್ವಾಮಿ, ರಮೇಶ್, ನಾಗೇಶ್, ಸ್ವಾಮಿಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.