ಬುದ್ಧರ ಅಸ್ತಿ ದರ್ಶನ: ಶ್ರೀಲಂಕಾದಿಂದ ಮೈಸೂರಿಗೆ ಆಗಮನ

  ವಿಜಯನಗರದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿರುವ ಸಿದ್ಧಾರ್ಥ ಬುದ್ಧವಿಹಾರದಲ್ಲಿ ಬುದ್ಧರ ಅಸ್ತಿಗೆ ಗೌರವವಂದನೆ ಸಲ್ಲಿಸಲಾಯಿತು. ಭಿಕ್ಕು ಇಂದರತನ ಥೇರೋ, ಇಳಮುರುಗನ್, ಜೈಕುಮಾರ್, ಬೋಧಿ ಚಂದ್ರನ್, ಎಚ್.ಶಿವರಾಜು, ಆರ್.ನಟರಾಜು, ಎಂ.ಸಾವಕಯ್ಯ ಇತರರಿದ್ದರು.
ವಿಜಯನಗರದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿರುವ ಸಿದ್ಧಾರ್ಥ ಬುದ್ಧವಿಹಾರದಲ್ಲಿ ಬುದ್ಧರ ಅಸ್ತಿಗೆ ಗೌರವವಂದನೆ ಸಲ್ಲಿಸಲಾಯಿತು. ಭಿಕ್ಕು ಇಂದರತನ ಥೇರೋ, ಇಳಮುರುಗನ್, ಜೈಕುಮಾರ್, ಬೋಧಿ ಚಂದ್ರನ್, ಎಚ್.ಶಿವರಾಜು, ಆರ್.ನಟರಾಜು, ಎಂ.ಸಾವಕಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ಧಾರ್ಥ ಬುದ್ಧವಿಹಾರದವರೆಗೆ ಮೆರವಣಿಗೆ
  • ಶ್ರೀಲಂಕಾದ ಬೌದ್ಧ ಭಿಕ್ಕು ಇಂದರತನ ಥೇರೋ ಸಮ್ಮುಖದಲ್ಲಿ ಆಗಮಿಸಿದ ಬುದ್ಧರ ಅಸ್ತಿ
ಮೈಸೂರು: ಶ್ರೀಲಂಕಾದಿಂದ ಮೈಸೂರಿಗೆ ಆಗಮಿಸಿದ ಭಗವಾನ್ ಬುದ್ಧರ ಅಸ್ತಿಯನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಿ ಗೌರವಪೂರ್ವಕವಾಗಿ ವಂದನೆ ಸಲ್ಲಿಸಲಾಯಿತು. ಜತೆಗೆ, ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಸಿದ್ಧಾರ್ಥ ಬುದ್ಧವಿಹಾರಕ್ಕೆ ಮೆರವಣಿಗೆಯ ಮೂಲಕ ಕರೆತರಲಾಯಿತು.
ಶ್ರೀಲಂಕಾದ ಬೌದ್ಧ ಭಿಕ್ಕು ಇಂದರತನ ಥೇರೋ ಸಮ್ಮುಖದಲ್ಲಿ ಆಗಮಿಸಿದ ಬುದ್ಧರ ಅಸ್ತಿಯನ್ನು ಕರ್ನಾಟಕ ಬುದ್ಧ ಧಮ್ಮ ಸಮಿತಿಯ ಪದಾಧಿಕಾರಿಗಳು ಬೌದ್ಧಭಿಕ್ಕುಗಳಿಗೆ ಹೂಗುಚ್ಚ ನೀಡಿ, ಬುದ್ಧರ ಅಸ್ತಿಗೆ ನಮಸ್ಕರಿಸಿ ಬರಮಾಡಿಕೊಂಡರು. ನಂತರ ವಿಹಾರದಲ್ಲಿರುವ ಬುದ್ಧರ ಮೂರ್ತಿಯ ಬಳಿ ಅಸ್ತಿಯನ್ನು ಇರಿಸಿ ಎಲ್ಲರ ಜತೆಗೂಡಿ ಬುದ್ಧವಂದನೆ ನೆರವೇರಿಸಲಾಯಿತು. 
ಈ ವೇಳೆ ಮಾತನಾಡಿದ ಭಿಕ್ಕು ಇಂದರತನ ಥೇರೋ, ಬುದ್ಧರು ಕುಶಿನಗರದಲ್ಲಿ ಮಹಾಪರಿನಿರ್ವಾಣ ಹೊಂದಿದ ನಂತರ ಅವರ ಅಸ್ತಿಯನ್ನು 8 ರಾಜ್ಯಗಳಿಗೆ ಹಂಚಲಾಯಿತು. 
ಆ ಅಸ್ತಿಗಳ ಮೇಲೆ ಅನೇಕ ಸ್ತೂಪ ನಿರ್ಮಿಸಲಾಯಿತು. ಚಕ್ರವರ್ತಿ ಅಶೋಕನ ನಂತರ ಅಸ್ತಿಗಳನ್ನು ಪುನಾ ಹಂಚಿ ಭಾರತದೆಲ್ಲೆಡೆ ಸ್ತೂಪ ಕಟ್ಟಿಸಿದರು. ದೇಶದಲ್ಲಿ ಶಾಂತಿ ಮತ್ತು ಧಮ್ಮ ಸಂದೇಶ ಸಾರಲು ಎಲ್ಲೆಡೆ ಬುದ್ಧರ ಅಸ್ತಿಯನ್ನು ತಂದು ಮೆರವಣಿಗೆ ಮಾಡಲಾಗುತ್ತಿದೆ. ಸಮಾಜದಲ್ಲಿ ಸಹೋದರತ್ವ ಮತ್ತು ಸಮಾನತೆ ಬಲಪಡಿಸುವುದು ಇದರ ಉದ್ದೇಶ ಎಂದರು.
ಬೌದ್ಧ ಪರಂಪರೆಯಲ್ಲಿ ಅಸ್ತಿಯನ್ನು ಪವಿತ್ರ ಚಿಹ್ನೆ ಎಂದು ಗೌರವಿಸಲಾಗುತ್ತದೆ. ಇದು ಬುದ್ಧರ ಧಮ್ಮವನ್ನು ನೆನಪಿಸುವ ಪ್ರತೀಕವಾಗಿದೆ. ಆಧುನಿಕ ಯುಗದ ಭರಾಟೆಯಲ್ಲಿ ಹಣ, ಅಂತಸ್ತು, ಆಸ್ತಿ, ಅಧಿಕಾರಕ್ಕಾಗಿ ಕಿತ್ತಾಟ, ಜಗಳ, ಕೊಲೆ ಸುಲಿಗೆ ನಡೆಯುತ್ತಿದ್ದು, ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಹೀಗಾಗಿ ವಿಶ್ವದಲ್ಲಿ ಶಾಂತಿ ನೆಲೆಸಲು ಬುದ್ಧರ ಸಂದೇಶ ಅನಿವಾರ್ಯ ಎಂದು ಹೇಳಿದರು.
ಇದೇ ವೇಳೆ ಬಿಕ್ಕುಗಳ ಸಮ್ಮುಖದಲ್ಲಿ ಬೋಧಿವೃಕ್ಷಕ್ಕೆ ಪೂಜೆ ಸಲ್ಲಿಸಿ, ತ್ರಿಸರಣ, ಪಂಚಶೀಲ ಪಠಿಸಲಾಯಿತು. ಇಳಮುರುಗನ್, ಜೈಕುಮಾರ್, ಬೋಧಿ ಚಂದ್ರನ್, ಸಮಿತಿಯ ಸಹಕಾರ್ಯದರ್ಶಿ ಎಚ್.ಶಿವರಾಜು, ಆರ್.ನಟರಾಜು, ಎಂ.ಸಾವಕಯ್ಯ, ನಿಸರ್ಗ ಸಿದ್ದರಾಜು, ಮಾ.ನಾಗಯ್ಯ, ಲಿಂಗಣ್ಣಯ್ಯ, ಮಹದೇವಸ್ವಾಮಿ, ಜಗದೀಶ್, ಅನಸೂಯ, ಪುಟ್ಟಸ್ವಾಮಿ, ರೂಪೇಶ್, ಪುನೀತ್, ಸುರೇಶ, ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net