ವ್ಯಸನಮುಕ್ತರಾಗಿ ಸುಂದರ ಬದುಕು ರೂಪಿಸಿಕೊಳ್ಳಿ

ಹುಣಸೂರು ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನಲ್ಲಿ ಮಾದಕವಸ್ತುಗಳ ಜಾಗೃತಿ ಕಾರ್ಯಕ್ರಮವನ್ನು ಪಿಎಸ್‌ಐ ಟಿ.ಎಂ.ತಾಜುದ್ದೀನ್ ಉದ್ಘಾಟಿಸಿದರು. ಎಂ.ಡಿ.ಡಾ.ಸಿ.ಯಮುನಾ, ಪ್ರಾಂಶುಪಾಲ ಡಾ.ಜೆ.ಸಿ.ನಾಗೇಂದ್ರ ವಿದ್ಯಾರ್ಥಿಗಳು ಇದ್ದರು.
ಹುಣಸೂರು ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನಲ್ಲಿ ಮಾದಕವಸ್ತುಗಳ ಜಾಗೃತಿ ಕಾರ್ಯಕ್ರಮವನ್ನು ಪಿಎಸ್‌ಐ ಟಿ.ಎಂ.ತಾಜುದ್ದೀನ್ ಉದ್ಘಾಟಿಸಿದರು. ಎಂ.ಡಿ.ಡಾ.ಸಿ.ಯಮುನಾ, ಪ್ರಾಂಶುಪಾಲ ಡಾ.ಜೆ.ಸಿ.ನಾಗೇಂದ್ರ ವಿದ್ಯಾರ್ಥಿಗಳು ಇದ್ದರು.
Published on
ಹುಣಸೂರು: ಮಾದಕವಸ್ತುಗಳ ವ್ಯಸನ ನಿಮ್ಮ ಬದುಕನ್ನು ಮೂರಾಬಟ್ಟೆಯಾಗಿಸುವ ಮೊದಲು ವ್ಯಸನಮುಕ್ತರಾಗಿ ಸುಂದರ ಬದುಕು ರೂಪಿಸಿಕೊಳ್ಳಿ ಎಂದು ನಗರಠಾಣೆ ಪಿಎಸ್‌ಐ ಟಿ.ಎಂ. ತಾಜುದ್ದೀನ್ ಕಿವಿಮಾತು ಹೇಳಿದರು.
ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಮತ್ತು ನಗರ ಠಾಣೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಾದಕವಸ್ತುಗಳ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವಸಮೂಹ ಮಾದಕವಸ್ತುಗಳ ಮೋಹಕ್ಕೆ ಸಿಲುಕುತ್ತಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗುತ್ತಿದೆ. ಅಧ್ಯಯನ, ಸಂಶೋಧನೆ ಎಲ್ಲವನ್ನು ಮರೆತು ತಮ್ಮ ಸುಂದರ ಬದುಕನ್ನು ಮಾದಕವಸ್ತುವೆಂಬ ಭೂತದ ಕೈಗೆ ನೀಡುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವ ಸಮೂಹವನ್ನು ಹೊಂದಿರುವ ನಮ್ಮ ದೇಶದ ಭವಿಷ್ಯಕ್ಕೆ ಮಾದಕವಸ್ತು ಮಾರಕ. ಹಾಗಾಗಿ ಯುವಕರು ಎಚ್ಚೆತ್ತುಕೊಳ್ಳಬೇಕು. ಕೃತಕ ಬುದ್ಧಿಮತ್ತೆಯ(ಎಐ) ಯುಗ ಇದಾಗಿದ್ದು, ನಿಮ್ಮ ಬುದ್ಧಿಯು ಅತ್ಯಂತ ಚುರುಕಾಗಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷೆ ಡಾ.ಸಿ.ಯಮುನಾ ವಹಿಸಿದ್ದರು. ಪ್ರಾಂಶುಪಾಲ ಡಾ ಜೆ.ಸಿ.ನಾಗೇಂದ್ರ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಬಿ.ಕುಮಾರ. ಅರ್ಪಿತಾ, ಪಟ್ಟಣ ಠಾಣೆ ಎನ್.ಎಸ್.ಪ್ರಸನ್ನಕುಮಾರ್, ಮಲ್ಲಿಕಾರ್ಜುನ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net