8 ರಿಂದ 31ರವರೆಗೆ ‘ಪುಸ್ತಕೋತ್ಸವ-ವಿಶೇಷ ರಿಯಾಯಿತಿಯಡಿ ಪುಸ್ತಕ ಮಾರಾಟ ಮೇಳ’

ಪ್ರೊ.ನಂಜಯ್ಯ ಎಂ.ಹೊಂಗನೂರು
ಪ್ರೊ.ನಂಜಯ್ಯ ಎಂ.ಹೊಂಗನೂರು
Published on

ಪ್ರಮುಖ ಮುಖ್ಯಾಂಶಗಳು

  • ಪ್ರೊ.ನಂಜಯ್ಯ ಎಂ.ಹೊಂಗನೂರು ಮಾಹಿತಿ
  • ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಮಾರಾಟ
  • ಮಾರಾಟಕ್ಕೆ 870 ಶೀರ್ಷಿಕೆಯ 9 ಲಕ್ಷಕ್ಕೂ ಹೆಚ್ಚು ಪುಸ್ತಗಳು ಇವೆ
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ‘ಪುಸ್ತಕೋತ್ಸವ-ವಿಶೇಷ ರಿಯಾಯಿತಿಯಡಿ ಪುಸ್ತಕ ಮಾರಾಟ ಮೇಳ’ವನ್ನು ಡಿ.8 ರಿಂದ 31ರವರೆಗೆ ಆಯೋಜಿಸಲಾಗಿದೆ ಎಂದು ನಿರ್ದೇಶಕ ಪ್ರೊ.ನಂಜಯ್ಯ ಎಂ.ಹೊಂಗನೂರು ಮಾಹಿತಿ ನೀಡಿರರು.
ಸಾರ್ವಜನಿಕರು, ವಿದ್ಯಾರ್ಥಿಗಳು, ಅಧ್ಯಾಪಕರು, ಉದ್ಯೋಗಿಗಳು ಸೇರಿ ಎಲ್ಲರಲ್ಲೂ ಓದುವ ಅಭಿರುಚಿ ಬೆಳೆಸುವ ಜತೆಗೆ ಪ್ರಸಾರಾಂಗದಲ್ಲಿರುವ ಜ್ಞಾನವನ್ನು ಎಲ್ಲರಿಗೂ ನೀಡುವ ಉದೇಶದಿಂದ ಪುಸ್ತಕೋತ್ಸವ ಆಯೋಜಿಸಲಾಗಿದೆ. ಪ್ರಸಾರಾಂಗ, ಪ್ರಾಚ್ಯ ವಿದ್ಯಾಸಂಶೋಧನಾಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಗಾಂಧಿ ಅಧ್ಯಯನ ಕೇಂದ್ರದಿಂದ ಪ್ರಕಟಗೊಂಡ ಪುಸ್ತಕಗಳ ಮಾರಾಟ ನಡೆಯಲಿದೆ. ಮಾನಸ ಗಂಗೋತ್ರಿಯ ಪ್ರಸಾರಾಂಗ ಮುಖ್ಯ ಕಚೇರಿ ಹಾಗೂ ರಾಮಸ್ವಾಮಿ ವೃತ್ತದ ಮಾರಾಟ ಮಳಿಗೆಯಲ್ಲಿ ವಿಶೇಷ ರಿಯಾಯಿತಿಯಲ್ಲಿ ಪುಸ್ತಕ ಮಾರಾಟ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಠ್ಯಕ್ರಮ ಮುಗಿದು ಹೋಗಿರುವ ಹಳೆಯ ಪದವಿಪೂರ್ವ ಹಾಗೂ ಪದವಿ(ಸೆಮಿಸ್ಟರ್) ಪಠ್ಯಪುಸ್ತಗಳು ಶೇ.75, ಪ್ರಕಟಣೆಗೊಂಡು 40 ವರ್ಷ ಮೀರಿದ ಪ್ರಸಾರಾಂಗದಲ್ಲಿ ಮಾರಾಟವಾಗುವ ಎಲ್ಲ ಪ್ರಕಟಣೆಗಳು ಶೇ.75, ಪ್ರಾಚ್ಯ ವಿದ್ಯಾಸಂಶೋಧನಾಲಯದ ಹಳೆಯ ಪ್ರಕಟಣೆಗಳು ಶೇ.70, ಕುವೆಂಪು ಕನ್ನಡ ಅಧ್ಯನ ಸಂಸ್ಥೆಯ ಹಳೆಯ ಪ್ರಕಟಣೆಗಳು ಶೇ.60, ಕನ್ನಡ ವಿಶ್ವಕೋಶ, ವಿಷಯ ವಿಶ್ವಕೋಶ ಹಾಗೂ ಎಪಿಗ್ರಾಫಿಯಲ್ ಕರ್ನಾಟಿಕದ ಎಲ್ಲ ಸಂಪುಗಳು ಶೇ.50, ಪ್ರಸಾರಾಂಗದ ದಾಸ್ತಾನಿನಲ್ಲಿರುವ ಎಲ್ಲ ಸಾಮಾನ್ಯ ಶೀರ್ಷಿಕೆಯ ಪುಸ್ತಕಗಳು ಶೇ.50, ಇಂಗ್ಲಿಷ್-ಕನ್ನಡ ನಿಘಂಟುಗಳು ಶೇ.25, ಪ್ರಚಾರೋಪನ್ಯಾಸ ಮಾಲೆಯ ಪುಸ್ತಗಳು ಶೇ.10, ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ಪತ್ರಿಕೆಯ ಶತಮಾನೋತ್ಸವ ಸಂಚಿಕೆ ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಸಾರಾಂಗಕ್ಕೆ ಇದೀಗ 92 ವರ್ಷ ತುಂಬಿದೆ. ಒಟ್ಟಾರೆ 12 ಕೋಟಿ ರೂ. ಮೌಲ್ಯದ ಪುಸ್ತಕಗಳು ಇಲ್ಲಿವೆ. 2,800ಕ್ಕೂ ಹೆಚ್ಚು ಶೀರ್ಷಿಕೆಯ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಮಾರಾಟಕ್ಕೆ 870 ಶೀರ್ಷಿಕೆಯ 9 ಲಕ್ಷಕ್ಕೂ ಹೆಚ್ಚು ಪುಸ್ತಗಳು ಇವೆ. ಪ್ರಸಾರಾಂಗದ ಎಲ್ಲ ಪುಸ್ತಕಗಳನ್ನು 40 ರಿಂದ 50 ಸಾವಿರ ರೂ.ಗಳಿಗೆ ಖರೀದಿಸಬಹುದಾಗಿದೆ ಎಂದರು.
ಈಗಾಗಲೇ ಗೂಗಲ್ ಮತ್ತು ಫೋನ್ ಪೇ ವ್ಯವಸ್ಥೆ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಪ್ರಸಾರಾಂಗದ ಪ್ರತ್ಯೇಕ ವೆಬ್ಸೈಟ್ ಮಾಡಲಾಗುತ್ತದೆ. ಅಲ್ಲಿ ಎಲ್ಲ ಪುಸ್ತಕದ ಮಾಹಿತಿಯೂ ಇರಲಿದೆ ಎಂದರು.
ಡಿ.15 ಮತ್ತು 16 ರಂದು ಪುಸ್ತಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಪ್ರಸಾರಾಂಗದ ಪ್ರಮುಖ ಪುಸ್ತಗಳ ಬಗ್ಗೆ ಚರ್ಚೆ, ಸಂವಾದ ನಡೆಯಲಿವೆ. ಜತೆಗೆ ನಮ್ಮ ನಿವೃತ್ತ ಉದ್ಯೋಗಿಗಳನ್ನು ಸನ್ಮಾನಿಸಲಾಗುತ್ತದೆ ಎಂದರು.
ಸಹಾಯಕ ನಿರ್ದೇಶಕ ಡಾ.ಬಿ.ಎಸ್.ಅನಿಲಕುಮಾರ್, ಅಧೀಕ್ಷಕ ಎಂ.ಡಿ.ಚನ್ನಬಸಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net