ವಿವೇಕ ಸಹಿತ ಬುದ್ಧಿವಂತಿಕೆಯಿಂದ ಆತ್ಮಾನಂದ

ಪ್ರತಿಭಾ ಪುರಸ್ಕಾರ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ  ಡಾ.ಕೆ. ಅನಂತರಾಮು,  ವಿಜಯಕುಮಾರ್ ನಾಗನಾಳ, ಸದಾನಂದ ಇನ್ನಿತರರಿದ್ದರು
ಪ್ರತಿಭಾ ಪುರಸ್ಕಾರ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಡಾ.ಕೆ. ಅನಂತರಾಮು, ವಿಜಯಕುಮಾರ್ ನಾಗನಾಳ, ಸದಾನಂದ ಇನ್ನಿತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ವಿದ್ವಾಸ ಡಾ.ಕೆ.ಅನಂತರಾಮು ಅಭಿಮತ
  • ಪ್ರತಿಭಾ ಪುರಸ್ಕಾರ, ಗುರುವಂದನೆ
ಮೈಸೂರು: ವಿದ್ಯಾರ್ಥಿಗಳು ಮಾರ್ಕ್‌ಗಿಂತ ರಿಮಾರ್ಕ್ಸ್ ಇಲ್ಲದಂತೆ ಬದುಕಬೇಕು. ಅಂಕಕ್ಕಿಂತ ಕಳಂಕ ಇಲ್ಲದಂತೆ ಬಾಳಬೇಕು ಎಂದು ಹಿರಿಯ ವಿದ್ವಾಂಸ ಡಾ.ಕೆ. ಅನಂತರಾಮು ಹೇಳಿದರು
ಶ್ರೀಕಾಶಿ ಶೇಷ ಶಾಸ್ತ್ರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಯಾದವಗಿರಿಯ ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ  ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿವ್ಯತ್ರಯರಾದ ರಾಮಕೃಷ್ಣ ಪರಮಹಂಸ, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಆಶಯದಂತೆ ಪರಿಪೂರ್ಣ ವ್ಯಕ್ತಿಗಳಾಗಬೇಕು. ಹಿತವಚನ, ಮಿತವಚನ, ಸತ್ಯವಚನ. ಹಿತ ಆಹಾರ, ಮಿತ ಆಹಾರ, ವೃಥಾ ಆಹಾರದ ಬಗ್ಗೆ ತಿಳಿಯಬೇಕು. ಮಾತು ಸರಿಯಿದ್ದರೆ ಎಲ್ಲವೂ ಸರಿ ಇರುತ್ತದೆ ಎಂದು ತಿಳಿಯಬೇಕು. ಅಲ್ಲದೆ ಬುದ್ಧಿ ಮತ್ತು ವಿವೇಕ ಬೇರೆ ಬೇರೆ. ಹೀಗಾಗಿ ವಿವೇಕ ಸಹಿತ ಬುದ್ಧಿವಂತರಾಗಬೇಕು ಎಂದರು.
ವಿದ್ಯಾರ್ಥಿಗಳು ಜಾಣತನದಲ್ಲಿ ಕಡಿಮೆ ಇಲ್ಲ. ಆದರೆ ಇವರ ನಡುವೆ ಕುಳಿತ ಜಾಗದಲ್ಲಿ ಪ್ರಪಂಚವನ್ನು ಹಾಳು ಮಾಡುವ ಪ್ರಚಂಡರು ಇದ್ದಾರೆ. ಬುದ್ಧಿ ಜಾಸ್ತಿ, ವಿವೇಕ ಕಡಿಮೆ ಇರುವುದು ಇದಕ್ಕೆ ಕಾರಣ. ಹೀಗಾಗಿ ಬುದ್ಧಿ ಜತೆಗೆ ವಿವೇಕವೂ ಕೂಡಿಸಬೇಕು ಎಂದರು.
ನಮ್ಮಲ್ಲಿ ಈಗ ನೀತಿ ಶಿಕ್ಷಣ ಇಲ್ಲ. ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗಿದ್ದಾರೆ. ಬುದ್ಧಿ ಹುಚ್ಚು ಕುದುರೆ ಇದ್ದಂತೆ. ವಿವೇಕ ಲಗಾಮು ಇದ್ದಂತೆ. ಬುದ್ಧಿ ಮತ್ತು ಹೃದಯ ಬೆಸುಗೆಯಾದರೆ ಇನ್ನೂ ಪ್ರಾಶಸ್ತ್ಯ ಸಿಗುತ್ತದೆ. ವಿವೇಕ ಸಹಿತ ಬುದ್ಧಿವಂತರಾದರೆ ಆತ್ಮಾನಂದ ಸಿಗುತ್ತದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್‌ನ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ಸಂಘದ ಸದಸ್ಯರಾಗಿರುವವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಜ್ಞಾನನಿಧಿ ಯೋಜನೆಯಡಿ ನೆರವು ನೀಡಲಾಗುವುದು ಎಂದರು.
ಟ್ರಸ್ಟಿನ ಮುಖ್ಯಸ್ಥರೂ ಆದ ಅಂಚೆ ಇಲಾಖೆಯ ನಿವೃತ್ತ ಸಹಾಯಕ ಲೆಕ್ಕಾಧಿಕಾರಿ ಸದಾನಂದ ಮಾತನಾಡಿ, ವಿದ್ಯಾರ್ಥಿಗಳು ಅಹಂ ಬಿಡಬೇಕು. ಇದನ್ನು ಬಿಟ್ಟರೆ ಎಲ್ಲವೂ ಸರಿ ಹೋಗುತ್ತದೆ ಎಂದರು. ವಿ.ಎಸ್. ರಾಜಣ್ಣ, ಪ್ರಾಥಮಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಬಿ.ಕೆ. ಬಸವರಾಜು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net