ದೇವರಾಜ ಅರಸು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಭೂ ರಹಿತರಿಗೆ ಭೂಮಿಯ ಹಕ್ಕು ನೀಡಿದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮದಲ್ಲದ ನಿವೇಶನಗಳನ್ನು ಪಡೆದರು. ದೇವರಾಜ ಅರಸು ಯಾವುದೇ ಕಳಂಕ ಇಲ್ಲದೆ ಆಡಳಿತ ನೀಡಿದರು. ಆದರೆ, ಸಿದ್ದರಾಮಯ್ಯ ಕಳಂಕ ಹೊತ್ತುಕೊಂಡು ಅಧಿಕಾರದಲ್ಲಿ ಮುಂದುವರೆದು ಇದೀಗ ‘ಸುದೀರ್ಘ ಅವಧಿಯ ಸಿಎಂ’ ಎಂಬ ದಾಖಲೆ ನಿರ್ಮಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.