ಪಿರಿಯಾಪಟ್ಟಣದಲ್ಲಿ ಬೈಕ್ ಜಾಥಾ

ಪಿರಿಯಾಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಬೈಕ್ ಜಾಥಾ ನಡೆಸಲಾಯಿತು. ವಿ.ರಾಜೇಂದ್ರ, ಕುಟ್ಟಿ, ಆರ್.ಟಿ.ಸತೀಶ್, ಪಿ ಜೆ ರವಿ ಇತರರು ಇದ್ದಾರೆ.
ಪಿರಿಯಾಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಬೈಕ್ ಜಾಥಾ ನಡೆಸಲಾಯಿತು. ವಿ.ರಾಜೇಂದ್ರ, ಕುಟ್ಟಿ, ಆರ್.ಟಿ.ಸತೀಶ್, ಪಿ ಜೆ ರವಿ ಇತರರು ಇದ್ದಾರೆ.
Published on

ಪಿರಿಯಾಪಟ್ಟಣ :

ರಾಷ್ಟ್ರದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವ ಮೂಲಕ ದೇಶಭಕ್ತಿ ಮೆರೆಯಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ ತಿಳಿಸಿದರು.

ತಾಲೂಕು ಬಿಜೆಪಿ ಘಟಕದ ವತಿಯಿಂದ ಪಟ್ಟಣದ ಮಸಣಿಕಮ್ಮ ದೇವಾಲಯದ ಎದುರು ಗುರುವಾರ ಹಮ್ಮಿಕೊಂಡಿದ್ದ ಶ್ರೀರಂಗ ಬೈಕ್ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಸ್ವತಂತ್ರ ದಿನಾಚರಣೆಗೂ ಮುನ್ನ ಪ್ರತಿ ಮನೆಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಪ್ರಧಾನಮಂತ್ರಿಗಳು ಕರೆ ನೀಡಿದ್ದು, ಇದರಂತೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ಜಾಥಾ ಹಮ್ಮಿಕೊಂಡು ಇದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ಜನತೆ ತಮ್ಮ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಭಕ್ತಿಯನ್ನು ಪ್ರದರ್ಶಿಸಬೇಕು ಎಂದರು.
ಬಿಜೆಪಿ ಯುವ ಘಟಕದ ಅಧ್ಯಕ್ಷ ಕುಟ್ಟಿ ಮಾತನಾಡಿ, ರಾಷ್ಟ್ರಧ್ವಜ ಹಾರಿಸಲು ಪ್ರತಿಯೊಬ್ಬರು ಹೆಮ್ಮೆಯಿಂದ ಕೈ ಜೋಡಿಸಬೇಕು. ಇದಕ್ಕಾಗಿ ಯುವಕರೊಂದಿಗೆ ಬೈಕ್ ಜಾಥಾ ನಡೆಸಿ ಜನರಲ್ಲಿ ರಾಷ್ಟ್ರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಆರ್.ಟಿ. ಸತೀಶ್, ಪಿ ಜೆ ರವಿ, ನಳಿನಿ , ಲೋಕಪಾಲಯ್ಯ , ಚನ್ನಬಸವರಾಜು, ಹೆಚ್.ಎಸ್.ರವಿ, ರಾಘವೇಂದ್ರ, ಅಶೋಕ್ ನಾಗೇಶ್ ಸ್ವಾಮಿ ವಿಶ್ವ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net