ಭಗವದ್ಗೀತೆ ಮನುಷ್ಯನ ನಡವಳಿಕೆ ತಿದ್ದುವ ನೀತಿಶಾಸ್ತ್ರ : ಎಂ.ಆರ್. ಸತ್ಯನಾರಾಯಣ ಅಭಿಮತ

ಮೈಸೂರಿನ ಶ್ರೀಕಾಂತ ಸಂಸ್ಕೃತ ಪಾಠ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗೀತಾಜಯಂತಿ ಸ್ಪರ್ಧೆಗಳ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಶ್ರೀಕೃಷ್ಣ ಗೀತೋಪದೇಶ ಮಾಡುತ್ತಿರುವ ಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಎಂ.ಆರ್. ಸತ್ಯನಾರಾಯಣ,  ಕೆ.ಆರ್. ಸಂತಾನಂ, ಎನ್.ವಿ. ಲಕ್ಷ್ಮೀ, ಕೆ.ಎಸ್. ಪ್ರದೀಪ್ ಕುಮಾರ್, ಎ.ಜಿ. ರಘು ಇದ್ದರು.
ಮೈಸೂರಿನ ಶ್ರೀಕಾಂತ ಸಂಸ್ಕೃತ ಪಾಠ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗೀತಾಜಯಂತಿ ಸ್ಪರ್ಧೆಗಳ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಶ್ರೀಕೃಷ್ಣ ಗೀತೋಪದೇಶ ಮಾಡುತ್ತಿರುವ ಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಎಂ.ಆರ್. ಸತ್ಯನಾರಾಯಣ, ಕೆ.ಆರ್. ಸಂತಾನಂ, ಎನ್.ವಿ. ಲಕ್ಷ್ಮೀ, ಕೆ.ಎಸ್. ಪ್ರದೀಪ್ ಕುಮಾರ್, ಎ.ಜಿ. ರಘು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರಿನ ಶ್ರೀಕಾಂತ ಸಂಸ್ಕೃತ ಪಾಠ ಶಾಲೆಯಲ್ಲಿ ಗೀತಾಜಯಂತಿ
  • ಗೀತಾಜಯಂತಿ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಮೈಸೂರು: ಭಗವದ್ಗೀತೆಯು ಮನುಷ್ಯನ ನಡವಳಿಕೆಯನ್ನು ತಿದ್ದುವ ಹಾಗೂ ಸನ್ಮಾರ್ಗದಲ್ಲಿ ನಡೆಸುವ ನೀತಿಶಾಸ್ತ್ರ. ಅಲ್ಲದೆ, ಮನುಷ್ಯನ ಸಂಕಷ್ಟ ಗಳನ್ನು ಪರಿಹರಿಸಲು ಹಾಗೂ ನಾಯಕತ್ವ ಗುಣ ಬೆಳೆಸಲು ಪ್ರೇರಕ ಶಕ್ತಿಯಾಗಿದೆ ಎಂದು ‘ವಿಜಯವಾಣಿ’ ಮೈಸೂರು ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಶ್ರೀಕಾಂತ ಸಂಸ್ಕೃತ ಪಾಠ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗೀತಾಜಯಂತಿ ಸ್ಪರ್ಧೆಗಳ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿ, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಹಾಗೂ ನಮ್ಮ ಶಕ್ತಿ ಸಾಮರ್ಥ್ಯವನ್ನು ಪರಿಣಾಮ ಕಾರಿಯಯಾಗಿ ಬಳಕೆ ಮಾಡಲು ಭಗವದ್ಗೀತೆಯು ನಮಗೆ ಬಹುದೊಡ್ಡ ನೀತಿಪಾಠವಾಗಿದೆ ಎಂದರು.
ಭವದ್ಗೀತೆಯು ನಮ್ಮ ಮನಸ್ಸನ್ನು ತಿದ್ದುವ ಕಾರ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರು ಭವದ್ಗೀತೆಯನ್ನು ಅಧ್ಯಯನ ಮಾಡಿ ಅದರಲ್ಲಿರುವ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಶಾಲಾ, ಕಾಲೇಜುಗಳ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಭಗವದ್ಗೀತೆಯು ಕೇವಲ ಸಂಸ್ಕೃತ ಪಾಠ ಶಾಲೆಗಳಿಗೆ ಮಾತ್ರ ಸೀಮಿತವಾಗದೆ ಎಲ್ಲ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕಲಿಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಭವದ್ಗೀತೆಯನ್ನು ಒಂದು ಧಾರ್ಮಿಕ ಚೌಕಟ್ಟಿಗೆ ಸೀಮಿತಗೊಳಿಸದೆ ಮನುಷ್ಯ ಧರ್ಮದ ಆದರ್ಶಪ್ರಾಯವಾದ ಬಹುದೊಡ್ಡ ಸಂಕೇತ ಎಂದು ಭಾವಿಸಬೇಕು. ಭಗವದ್ಗೀತೆಯ ಮೌಲ್ಯಗಳನ್ನು ಎಲ್ಲರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆ.ಎನ್. ವರದರಾಜ ಅಯ್ಯಂಗಾರ್ ಮೆಮೋರಿಯಲ್ ಟ್ರಸ್ಟ್ ಮಾರ್ಗದರ್ಶಕ ಕೆ.ಆರ್. ಸಂತಾನಂ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಭವದ್ಗೀತೆಗೆ ಉತ್ತಮ ಸ್ಥಾನವಿದೆ. ಬೈಬಲ್ ಬಿಟ್ಟರೆ ವಿಶ್ವದಲ್ಲಿ ಅತಿ ಹೆಚ್ಚು ಮುದ್ರಣವಾದ ಕೃತಿ ಭಗವದ್ಗೀತೆ ಎಂದು ಹೇಳಿದರು.
ಶ್ರೀಕಾಂತ ಸಂಸ್ಕೃತ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಎನ್.ವಿ. ಲಕ್ಷ್ಮೀ, ಶ್ರೀಕಾಂತ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಸ್. ಪ್ರದೀಪ್ ಕುಮಾರ್, ಕಾರ್ಯದರ್ಶಿ ಎ.ಜಿ. ರಘು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net