ಸಾಮಾಜಿಕ ಕಾರ್ಯಗಳಿಗೆ ರೋಟರಿ ಸಂಸ್ಥೆ ಆದ್ಯತೆ

ಕೋಮಲಾಪುರದ ಶ್ರೀರಾಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿರುಮಲಾಪುರ ರಾಜೇಗೌಡ ಮಾತನಾಡಿದರು.
ಕೋಮಲಾಪುರದ ಶ್ರೀರಾಮ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿರುಮಲಾಪುರ ರಾಜೇಗೌಡ ಮಾತನಾಡಿದರು.
Published on
ಬೆಟ್ಟದಪುರ: ಸಮಾಜ ಸೇವೆ ರೋಟರಿ ಸಂಸ್ಥೆಯ ಮೂಲ ಉದ್ದೇಶ ಎಂದು ರೋಟರಿ ಸಂಸ್ಥೆ ಸಹಾಯಕ ಪ್ರಾಂತಪಾಲ ತಿರುಮಲಾಪುರ ರಾಜೇಗೌಡ ತಿಳಿಸಿದರು.
ಸಮೀಪದ ಕೋಮಲಾಪುರದ ಶ್ರೀರಾಮ ಪ್ರೌಢಶಾಲೆಯಲ್ಲಿ ರೋಟರಿ ಮಿಡ್‌ಟೌನ್ ವತಿಯಿಂದ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ, ಸಾಮಾಜಿಕ, ಆರೋಗ್ಯ ಸೇರಿದಂತೆ ಸಮಾಜದ ಹಲವು ಕ್ಷೇತ್ರಗಳಲ್ಲಿ ರೋಟರಿ ಸಂಸ್ಥೆ ತನ್ನ ಕೈಲಾದ ಸಹಾಯ ಮಾಡುವ ಮೂಲಕ ಸಮಾಜದ ಬದಲಾವಣೆಗೆ ಸಹಕರಿಸುತ್ತಿದೆ ಎಂದರು.
ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಿ ಮಲ್ಲಾರಾಧ್ಯ ಮಾತನಾಡಿ, ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಹಿರಿಯ ವಿದ್ಯಾರ್ಥಿ ತಿರುಮಲಾಪುರ ರಾಜೇಗೌಡ ಅವರು ರೋಟರಿ ಸಂಸ್ಥೆ ಮುಖಾಂತರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಟ್ಟಿರುವುದು ಸಂತಸದ ವಿಷಯ ಎಂದರು.
ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಪ್ರೇಮ್‌ಕುಮಾರ್, ಕೋಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ರೋಟರಿ ಮಿಡ್‌ಟೌನ್ ಅಧ್ಯಕ್ಷ ಜಗನ್‌ಗೌಡ, ಮಾಜಿ ಸಹಾಯಕ ಪ್ರಾಂತಪಾಲ ಸತ್ಯನಾರಾಯಣ್, ಯೂತ್ ಸರ್ವೀಸ್ ಡೈರೆಕ್ಟರ್  ಗುರುದತ್, ವಲಯ ಸೇನಾನಿ ಕುಮಾರ್, ಶಾಲೆ ಮುಖ್ಯಶಿಕ್ಷಕ ಆರಾಧ್ಯ ಕಿಶೋರ್, ಸಂಸ್ಥೆಯ ಖಜಾಂಚಿ ರಾಮಚಂದ್ರಶೆಟ್ಟಿ ಮಾತನಾಡಿದರು. ಇದೇ ವೇಳೆ ತಿರುಮಲಾಪುರ ರಾಜೇಗೌಡ ಮತ್ತು ರೋಟರಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ರೋಟರಿ ಮಿಡ್ ಟೌನ್ ಕಾರ್ಯದರ್ಶಿ ಚೇತನ್, ಹಿರಿಯ ಸದಸ್ಯರಾದ ವಿನಯ್ ಶೇಖರ್, ಸತೀಶ್‌ಕುಮಾರ್, ಸುನಿಲ್, ಸಂಸ್ಥೆ ನಿರ್ದೇಶಕ ಸುಂದರೇಗೌಡ, ಶಿಕ್ಷಕರಾದ ಎನ್.ಆರ್.ಕಾಂತರಾಜು, ಕೀರ್ತಿಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net