ಇದ್ದಕ್ಕಿದಂತೆ ಅತಿಯಾದ ಬಾಯಾರಿಕೆ ಕಾಣಿಸಿಕೊಳ್ಳುವುದು, ಅತಿಯಾದ ಸುಸ್ತು-ಆಯಾಸ ಕಾಣಿಸಿಕೊಳ್ಳುವುದು, ದೇಹದ ತೂಕ ಕಡಿಮೆಯಾಗುವುದು, ರೋಗನಿರೋಧಕ ಶಕ್ತಿ ಕಡಿಮೆ ಆಗುವುದು, ಇಂತಹ ಹಲವಾರು ರೋಗಲಕ್ಷಣಗಳನ್ನು ಆರಂಭದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಕಾಯಿಲೆಯ ಕೆಲವೊಂದು ಎಚ್ಚರಿಕೆಯ ಆರೋಗ ಲಕ್ಷಣಗಳನ್ನು ಮೊದಲೇ ಗುರುತಿಸಿ, ಆರಂಭದಲ್ಲಿ ವೈದ್ಯರ ಸಲಹೆ ಪಡೆದು, ಮಧುಮೇಹವನ್ನು ತಡೆಗಟ್ಟಬಹುದು.