ಬನ್ನೂರಿನಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ವೈದ್ಯರು ರೋಗಿಗಳ ನೇತ್ರ ತಪಾಸಣೆ ನಡೆಸಿದರು. ಡಾ.ಮಹೇಂದ್ರಸಿಂಗ್ ಕಾಳಪ್ಪ, ಕೆ.ರಾಜೇಶ್‌ಕುಮಾರ್, ವಿಜಯ್‌ಕುಮಾರ್, ಯಾಸೀನ್ ಮತ್ತಿತರರಿದ್ದರು.
Published on:
Copied
Follow Us
ಬನ್ನೂರು: ಅಂಧತ್ವದಲ್ಲಿ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬರು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಿ ಎಂದು ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಸಲಹೆ ನೀಡಿದರು.
ಪಟ್ಟಣದ ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಕಾವೇರಿ ಟ್ರಸ್ಟ್, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕಣ್ಣಿನ ತಪಾಸಣಾ ಉಚಿತ ಶಿಬಿರದಲ್ಲಿ ಅವರು ಮಾತನಾಡಿದರು.
ಸಮಾಜದ ಗ್ರಾಮೀಣ ಪ್ರದೇಶದಲ್ಲಿ ದೃಷ್ಟಿಹೀನರ ಸಂಖ್ಯೆ ಅಧಿಕವಾಗಿದ್ದು, ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಣ್ಣಿನ ಉಚಿತ ತಪಾಸಣೆ ಶಿಬಿರ ನಡೆಸಲಾಗುತ್ತಿದೆ. ಕಣ್ಣಿನ ಪೊರೆ, ಗ್ಲಾಕೋಮಾ, ನೀರು ಸೋರುವಿಕೆ, ಕಣ್ಣಿನಲ್ಲಿ ಗೀಜು ಬರುವುದು, ಹತ್ತಿರ ಮತ್ತು ದೂರ ದೃಷ್ಟಿದೋಷ ಮತ್ತಿತರರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ವೈದ್ಯರು ಕಣ್ಣಿನ ಪೊರೆ ಇರುವವರನ್ನು ಆಯ್ಕೆ ಮಾಡಿ, ಕೊಯಮತ್ತೂರು ಕಣ್ಣಿನ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿ, ಶಸ್ತ್ರಚಿಕಿತ್ಸೆ ಮಾಡಿಸಿ ಸ್ವಸ್ಥಳಕ್ಕೆ ತಂದು ಬಿಡುತ್ತಾರೆ ಎಂದರು.
ವಿವಿಧ ಗ್ರಾಮದಿಂದ ಸುಮಾರು 170ಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಗಮಿಸಿ ಕಣ್ಣಿನ ತಪಾಸಣೆಗೆ ಮಾಡಿಸಿಕೊಂಡರು. ಕೆ.ರಾಜೇಶ್‌ಕುಮಾರ್, ವಿಜಯ್‌ಕುಮಾರ್, ಸಂತೋಷ್‌ಕುಮಾರಿ, ವನ್ಯಾ, ವಿರಾಟ್, ಯಾಸೀನ್, ಮೂರ್ತಿ ಮತ್ತಿತರರು ಹಾಜರಿದ್ದರು.