ಹೇಳುವವರು, ಕೇಳುವವರು ಯಾರೂ ಇಲ್ಲದ, ಅರ್ಧಕ್ಕೆ ನಿಂತಿರುವ ಸಮುದಾಯ ಭವನ ಈಗ ಕುದುರೆ ಕಟ್ಟುವ ಲಾಯವಾಗಿ ಮಾರ್ಪಾಡಾಗಿದೆ. ಶ್ರೀಕಂಠೇಶ್ವರ ದೇವಾಲಯದ ಮುಂಭಾಗದಲ್ಲಿ ಪ್ರವಾಸಿಗರಿಗೆ ಮತ್ತು ದರ್ಶನಕ್ಕಾಗಿ ಪರ ಊರಿನಿಂದ ಬಂದ ಯಾತ್ರಾರ್ಥಿಗಳಿಗೆ ಕುದುರೆ ಸವಾರಿ ಮಾಡಿಸುವವರು ಸಂಜೆಯ ವೇಳೆ ಭವನದ ಆವರಣದಲ್ಲೇ ಕುದುರೆಗಳನ್ನು ಕಟ್ಟಿ ಮನೆಗೆ ಹೋಗುತ್ತಾರೆ. ರಾತ್ರಿಯ ವೇಳೆ ಇದು ಮದ್ಯಪ್ರಿಯರ ಮತ್ತು ಅನೈತಿಕ ಚಟುವಟಿಕೆ ಮಾಡುವವರ ತಾಣವಾಗಿರುವುದು ಬೇಸರದ ಸಂಗತಿಯಾಗಿದೆ.