ಮೈಸೂರಿನಲ್ಲಿ ಆಟೋ ದರ ಪರಿಷ್ಕರಣೆ

ಮೈಸೂರಿನಲ್ಲಿ ಆಟೋ ರಿಕ್ಷಾ ದರ ಪರಿಷ್ಕರಣೆ ಮಾಡಲಾಗಿದೆ.
ಮೈಸೂರಿನಲ್ಲಿ ಆಟೋ ರಿಕ್ಷಾ ದರ ಪರಿಷ್ಕರಣೆ ಮಾಡಲಾಗಿದೆ.
Published on
ಮೈಸೂರು: ಜಿಲ್ಲೆಯಲ್ಲಿ ಆಟೋರಿಕ್ಷಾಗಳ ದರವನ್ನು ಜ.1 ರಿಂದ ಅನ್ವಯ ಆಗುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರಿಷ್ಕರಣೆ ಮಾಡಿದೆ.
ಕನಿಷ್ಠ ದರ ಮೊದಲ 2 ಕೀ.ಮೀ.ಗೆ (ಮೂರು ಪ್ರಯಾಣಿಕರಿಗೆ) 36 ರೂ., ನಂತರ ಪ್ರತಿ ಕಿ.ಮೀ.ಗೆ 18 ರೂ. ನಿಗದಿ ಪಡಿಸಲಾಗಿದೆ. ಕಾಯುವಿಕೆ ದರ ಮೊದಲ 5 ನಿಮಿಷಕ್ಕೆ ಉಚಿತವಾಗಿದ್ದು, ನಂತರದ ಪ್ರತಿ 15 ನಿಮಿಷಕ್ಕೆ 10 ರೂ. ನಿಗದಿ ಪಡಿಸಲಾಗಿದೆ. ಲಗೇಜಿಗೆ ಸಂಬಂಧಿಸಿದಂತೆ 20 ಕೆ. ಜಿ.ವರೆಗೆ ಉಚಿತವಿದ್ದು, ನಂತರದ ಪ್ರತಿ 20 ಕೆ.ಜಿ.ಗೆ 10 ರೂ. ನಿಗದಿ ಪಡಿಸಲಾಗಿದ್ದು, ಪ್ರಯಾಣಿಕರ ಗರಿಷ್ಠ ಲಗೇಜು 50 ಕೆ. ಜಿ ನಿಗದಿಯಾಗಿದೆ.
ರಾತ್ರಿ ವೇಳೆಯ ಪ್ರಯಾಣಕ್ಕೆ ಪ್ರತ್ಯೇಕ ದರ ನಿಗದಿ ಪಡಿಸಲಾಗಿದೆ. ರಾತ್ರಿವೇಳೆ ಸಾಮಾನ್ಯ ದರ + ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು (ರಾತ್ರಿ 10 ರಿಂದ ಬೆಳಗ್ಗೆ ಜಾವ 5ವರೆಗೆ) ದರವನ್ನು ನಿಗದಿ ಪಡಿಸಲಾಗಿಎ. ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾದಲ್ಲಿ ಪ್ರದರ್ಶಿಸಬೇಕು. ಪರಿಷ್ಕೃತ ದರಗಳಿಗೆ ಅನುಗುಣವಾಗಿ ಮೀಟರ್‌ಗಳನ್ನು ಜ.1 ರಿಂದ ಎರಡು ತಿಂಗಳ ಒಳಗಾಗಿ ಸತ್ಯಾಪನೆ (ರೀಕ್ಯಾ ಲಿಬರೇಟ್) ಯನ್ನು ಕಾನೂನು ಮಾಪನಾ ಇಲಾಖೆಯಲ್ಲಿ ಮಾಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net