ಬನ್ನೂರಿನಲ್ಲಿ ಕಾಲು ಕಳೆದುಕೊಂಡು ಜೀವನ ನಿರ್ವಹಣೆಗೆ ಶ್ರಮ ಪಡುತ್ತಿದ್ದ ಮಹಮದ್ ಫೀರ್ ಮತ್ತು ಗುಲ್‌ಫಾನ್ ಅವರಿಗೆ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಕೃತಕ ಕಾಲು ಜೋಡಣೆ ಮಾಡಿಸುವ ಮೂಲಕ ನೆರವಾದರು. ದೇವರಾಜು, ನಾಗರಾಜು, ಬಾಬು, ಸುದರ್ಶನ್, ಅಲ್ತಫ್ ಇತರರು ಇದ್ದರು.
ಬನ್ನೂರು: ಪಟ್ಟಣದಲ್ಲಿ ಕಾಲು ಕಳೆದುಕೊಂಡು ಸಂಕಷ್ಟದಲ್ಲಿ ಜೀವನ ಕಳೆಯುತ್ತಿದ್ದಂತ ಮಾಕನಹಳ್ಳಿ ಹೌಸಿಂಗ್‌ಬೋರ್ಡ್ ನಿವಾಸಿಗಳಾದ ಮಹಮದ್ ಫೀರ್ ಮತ್ತು ಗುಲ್‌ಫಾನ್ ಅವರಿಗೆ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್ ಕಾಳಪ್ಪ ಕೃತಕ ಕಾಲು ಜೋಡಣೆ ಮಾಡಿಸುವ ಮೂಲಕ ನೆರವಾಗಿದ್ದಾರೆ.
ಡಾ.ಮಹೇಂದ್ರಸಿಂಗ್‌ಕಾಳಪ್ಪ ಮಾತನಾಡಿ, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಇವರ ಬವಣೆ ತಿಳಿದು, ಕೃತಕ ಕಾಲು ಜೋಡಣೆ ಮಾಡಿಸುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ. ಇದೇ ರೀತಿ ಪ್ರತಿಯೊಬ್ಬರೂ ಸೇವಾ ಮನೋಭಾವ ಬೆಳೆಸಿಕೊಂಡು ಮತ್ತೋಬ್ಬರಿಗೆ ನೆರವಾಗಬೇಕು. ಮಹಮದ್ ಫೀರ್ ಹಾಗೂ ಗುಲ್‌ಫಾನ್ ಅವರು ಯಾವುದೇ ಸಮಯದಲ್ಲಿ ನೆರವಿಗೆ ಅಗತ್ಯವಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ದೇವರಾಜು, ನಾಗರಾಜು, ಬಾಬು, ಸುದರ್ಶನ್, ಅಲ್ತಫ್ ಇತರರು ಇದ್ದರು.