ಕಲೆ ಮಾನವನ ಉನ್ನತಿಗೆ ಸಹಕಾರಿ : ಡಾ.ಪಿ.ಕೆ. ರಾಜಶೇಖರ

 ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ವರ್ಧಿನಿ’ ರಾಜ್ಯಮಟ್ಟದ ಕಲಾ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಡಾ.ಪಿ.ಕೆ. ರಾಜಶೇಖರ, ಬಿ. ನಿರಂಜನಮೂರ್ತಿ, ಡಾ.ರೇಚಣ್ಣ, ಹೊನ್ನಶೆಟ್ಟಿ ಇದ್ದರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ವರ್ಧಿನಿ’ ರಾಜ್ಯಮಟ್ಟದ ಕಲಾ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಡಾ.ಪಿ.ಕೆ. ರಾಜಶೇಖರ, ಬಿ. ನಿರಂಜನಮೂರ್ತಿ, ಡಾ.ರೇಚಣ್ಣ, ಹೊನ್ನಶೆಟ್ಟಿ ಇದ್ದರು.
Published on
ಮೈಸೂರು: ಕಲೆ ಮಾನವನ ಉನ್ನತಿಗೆ ಮತ್ತು ಸಂತೋಷಕ್ಕೆ ಕಾರಣವಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ವರ್ಧಿನಿ’ ರಾಜ್ಯಮಟ್ಟದ ಕಲಾ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕಲೆ ಇಲ್ಲದೆ ಜೀವನವಿಲ್ಲ. ಮನುಷ್ಯ ಹುಟ್ಟಿನಿಂದ ಸಾಯುವ ತನಕ ಕ್ರಿಯಾಶೀಲತೆ ಮತ್ತು ಕಲಾತ್ಮಕತೆಯಲ್ಲಿ ತೊಡಗಿರುತ್ತಾನೆ. ಜನಪದ ಕಲಾವಿದರು ಪರಂಪರೆಯನ್ನು ರೂಢಿಸಿಕೊಂಡು ಬೆಳೆಸಿದ್ದಾರೆ ಎಂದು ತಿಳಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ, ಪ್ರಾಂಶುಪಾಲ ಡಾ.ರೇಚಣ್ಣ, ಕಲಾ ಸಂಭ್ರಮದ ಸಂಚಾಲಕ ಹೊನ್ನಶೆಟ್ಟಿ ಇದ್ದರು.
ವಿಜೇತರ ವಿವರ: ನಗರದ ಮಹಾರಾಜ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ‘ಹೆಜ್ಜೆ ಗೆಜ್ಜೆ’ ಏಕವ್ಯಕ್ತಿ ವಿಭಾಗದಲ್ಲಿ ಮೈಕಾಸ್ ಕಾಲೇಜಿನ ಎಸ್. ಹರ್ಷಿತ, ಸೆಂಟ್ ಜೋಸೆಫ್ ಕಾಲೇಜಿನ ಧೀರಜ್ ಸಿಂಗ್ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಪಡೆದರು. ಅದೇ ರೀತಿ ಸಮೂಹ ನೃತ್ಯದಲ್ಲಿ ಮಹಾರಾಜ ಕಾಲೇಜಿನ ಲೇಖನ ತಂಡ, ಜೆಎಸ್‌ಎಸ್ ಸ್ಕೂಲ್ ಆಫ್ ಲೈಫ್ ಸೈನ್ಸ್‌ನ ಜಾನು ತಂಡ, ರಾಗನಿನಾದ ಏಕವ್ಯಕ್ತಿ ವಿಭಾಗದಲ್ಲಿ ಮಹಾರಾಜ ಕಾಲೇಜಿನ ಸಿ.ಯೋಗಶ್ರೀ, ಜೆಎಸ್‌ಎಸ್ ದಂತ ವೈದ್ಯ ಕಾಲೇಜಿನ ಕವನ ಎಸ್. ಆರಾಧ್ಯ, ಸಮೂಹ ಗಾಯನದಲ್ಲಿ ಶೇಷಾದ್ರಿಪುರಂ ಕಾಲೇಜಿನ ರುಚಿತಾ ತಂಡ, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜಿನ ಭೂಮಿಕಾ ತಂಡ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದರು.
ರಂಗೋಲಿ ಸ್ಪರ್ಧೆಯಲ್ಲಿ ಎಸ್‌ಡಿಎಂ ಕಾಲೇಜಿನ ಎಸ್. ಸಂಜನಾ ಶೇಷಾದ್ರಿಪುರಂ ಪದವಿ ಕಾಲೇಜಿನ ಆರ್. ಭಾವನಾ, ಸ್ವರಚಿತ ಕವನ ವಾಚನದಲ್ಲಿ ಎಸ್‌ಡಿಎಮ್ ಕಾಲೇಜು ಕೆ. ನಿಸರ್ಗ, ಸಂತ ಫಿಲೋಮಿನಾ ಕಾಲೇಜಿನ ಲಾವಣ್ಯ, ವಾಗ್ವಿಲಾಸದಲ್ಲಿ ಮಹಾರಾಜ ಕಾಲೇಜಿನ ಎ.ಎಸ್. ನಂದೀಶ, ಎಸ್‌ಡಿಎಂ ಕಾಲೇಜಿನ ಎಂ.ಆರ್. ಹರ್ಷ, ಇಂಧನ ರಹಿತ ಅಡುಗೆ ಸ್ಪರ್ಧೆಯಲ್ಲಿ ಮಹಾರಾಜ ಕಾಲೇಜಿನ ಎಂ.ಆರ್. ದೀಪಿಕಾ, ಮಹಾರಾಜ ಕಾಲೇಜಿನ ಕೆ.ಎಂ. ಯೋಗೇಶ್ವರಿ ಬಹುಮಾನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net