ಬೆಂಗಳೂರು ನಿವಾಸಿ ನುಹೇದ್ ಖಾನ್, ಮೈಸೂರಿನ ಗೌಸಿಯಾನಗರ ನಿವಾಸಿಗಳಾದ ಸುಹೇಲ್ ಪಾಷ, ಜಿಯಾ ಉಲ್ಲಾ, ಲಷ್ಕರ್ ಮೊಹಲ್ಲಾ ನಿವಾಸಿ ಪೆಡ್ಲರ್ ಜಾವೀದ್ ಅಹಮ್ಮದ್ ಬಂಧಿತರು. ಸಿಸಿಬಿ ಎಸಿಪಿ ಮಹಮ್ಮದ್ ಶರೀಫ್ ರಾವುತರ್ ಅವರ ಮಾಹಿತಿಯ ಮೇರೆಗೆ ಸೋಮವಾರ ಪಿಐ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ಅಧಿಕಾರಿಗಳಾದ ಪಿಎಸ್‌ಐ ಕೆ.ಲೇಪಾಕ್ಷ, ಜೋತಾ ್ಸ್ನರಾಜ್, ರೇವಣಸಿದ್ದಪ್ಪ ಹಾಗೂ ಸಿಬ್ಬಂದಿ ಮಧುಕುಮಾರ್, ಚೇತನ್, ಅಧಾಮ್, ಕಿರಣ್ ರಾಥೋಡ್, ಸಂತೋಷ್ ಪವಾರ್, ಹಜ್ರತ್ ಅಲಿ, ರಾಜಾಸಾಬ್, ಸಮೀರ್, ಯಶ್ವಂತ್, ದೇವರಾಜು, ಮಮತಾ ಎನ್.ಜಿ. ಹಾಗೂ ಸಿದ್ದರಾಜು, ಸುರೇಶ್ ಕಾರ್ಯಾಚರಣೆ ನಡೆಸಿದ್ದಾರೆ.