

ಪ್ರಮುಖ ಮುಖ್ಯಾಂಶಗಳು
ದಸರಾ ವಸ್ತುಪ್ರದರ್ಶನಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಇಲಾಖೆಗಳು, ಜಿಲ್ಲಾ ಪಂಚಾಯಿತಿಗಳಿಗೆ ಪತ್ರ ವ್ಯವಹಾರದ ಮೂಲಕ ಮಳಿಗೆ ತೆರೆಯಲು ಕೋರಲಾಗಿದೆ. ಸಿವಿಲ್ ಕೆಲಸ ಭರದಿಂದ ಸಾಗಿದೆ. ಈ ಸಲ ವಿನೂನತವಾಗಿ ದಸರಾ ವಸ್ತುಪ್ರದರ್ಶನವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗುವುದು. ದಸರಾ ವಸ್ತುಪ್ರದರ್ಶನದಿಂದ 12.53 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. ಕಳೆದ ಎರಡು ವರ್ಷದಲ್ಲಿ 4 ಕೋಟಿ ರೂ. ಆದಾಯ ಹೆಚ್ಚಿಸಲಾಗಿದೆ.
ದಸರಾ ವಸ್ತುಪ್ರದರ್ಶನ ನಿರ್ವಹಣೆ ಜವಾಬ್ದಾರಿ ವಹಿಸಲು ಜಾಗತಿಕ ಟೆಂಡರ್ ಕರೆಯಲಾಗಿದ್ದು, ಅರ್ಜಿ ಸಲ್ಲಿಸಲು ಸೆ.16ರಂದು ಕೊನೆಯ ದಿನವಾಗಿದೆ. ಆದಾಯಕ್ಕೆ ಅನುಗುಣವಾಗಿ ವಿಶಿಷ್ಟ, ವಿನೂತನ ಕಾರ್ಯಕ್ರಮ ರೂಪಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುವುದು.