16 ವಿವಿಧ ಪ್ರಕರಣಗಳು: ಆರೋಪಿ ಪಂಕಜ್ ಕುಮಾರ್ ಬಿಹಾರ ಪೊಲೀಸರಿಗೆ ಬೇಕಿದ್ದ ಮುಖ್ಯ ಆರೋಪಿಯಾಗಿದ್ದು, ಈತನ ಮೇಲೆ ಬಿಹಾರ, ಜಾರ್ಖಂಡ್, ಕರ್ನಾಟಕ ಮತ್ತು ರಾಜಾಸ್ತಾನ ರಾಜ್ಯದಲ್ಲಿ ಕೊಲೆಯತ್ನ, ಡಕಾಯಿತಿ, ದರೋಡೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಒಟ್ಟು 16 ಪ್ರಕರಣಗಳು ಇವೆ. ಮತ್ತೊಬ್ಬ ಆರೋಪಿ ಹೃಷಿಕೇಶ್ ಸಿಂಗ್ ವಿರುದ್ಧ ಇಂತಹುದೇ ಪ್ರಕರಣಗಳಿಗೆ ಸಂಬಂಧಿಸಿದೆ ನಾಲ್ಕು ಕ್ರಿಮಿನಲ್ ಕೇಸ್‌ಗಳೊಂದಿಗೆ ಇಂತಹುದೇ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ಇವೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಬಿಹಾರ ಮತ್ತು ಕರ್ನಾಟಕ ಪೊಲೀಸರು ಬಿಹಾರದ ಭಾಗಲ್ಪುರ ಮತ್ತು ದರ್ಭಾಂಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಶುಕ್ರವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕುಬಿದ್ದಿದ್ದಾರೆ ಎಂದು ತಿಳಿದುಬಂದಿದೆ.