ಆ್ಯಪಲ್ ಕಂಪನಿಯು ಐ ಫೋನ್, ಐಪ್ಯಾಡ್ ಸೇರಿದಂತೆ ಹಲವು ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಕಂಪನಿಯು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ, ಕೆ.ಟಿ. ಸ್ಟ್ರೀಟ್‌ನಲ್ಲಿರುವ ನರೇಶ್ ಟೆಲ್ಕಾಂ, ಶ್ರೀ ಕೃಷ್ಣ ಟೆಲ್ಕಾಂ, ರಾಜ್ ಟೆಲ್ಕಾಂ, ಮಹೇಶ್ ಟೆಲ್ಕಾಂ, ಮದನ್ ಟೆಲ್ಕಾಂ, ನೇಮಿನಾಥ್ ಟೆಲ್ಕಾಂ, ಲಲಿತ್ ಟೆಲ್ಕಾಂ, ಕೃಷ್ಣ ಟೆಲ್ಕಾಂ, ಹನುಮಾನ್ ಟೆಲ್ಕಾಂನವರು ಕಂಪನಿಯ ನಕಲಿ ಹಾಗೂ ಮೋಸದ ಉತ್ಪನ್ನಗಳನ್ನು ಅನಧಿಕೃತ ಮತ್ತು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದಾರೆ.