ಬೈಲುಕುಪ್ಪೆ ಗ್ರಾಮ ಠಾಣಾ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ಇದನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಕಿರಣ್, ರವಿ, ಶರತ್ ಇತರರು ಇದ್ದಾರೆ.
Published on:
Copied
Follow Us
ಬೈಲುಕುಪ್ಪೆ: ಗ್ರಾಮ ಠಾಣಾ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಗ್ರಾಪಂ ಕಚೇರಿ ಆವರಣದಲ್ಲಿ ಅಧ್ಯಕ್ಷ ರಘು ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪಂಚಾಯಿತಿ ವ್ಯಾಪ್ತಿಗೆ ಬರುವ ಹಳೆಯೂರು ಗ್ರಾಮದಿಂದ ಲಕ್ಷ್ಮೀಪುರಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದಲ್ಲಿ ಒಂದು ಎಕರೆಗೂ ಹೆಚ್ಚು ಗ್ರಾಮ ಠಾಣಾ ಜಾಗವಿದ್ದು ಇದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಒತ್ತುವರಿ ತೆರವು ಮಾಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಪಂಚಾಯಿತಿ ಕಾರ್ಯದರ್ಶಿ ಕುಮಾರ್, ಗ್ರಾಮಸ್ಥರಾದ ಕಿರಣ್, ರವಿ, ಶರತ್, ಶಶಿ, ಅರುಣ, ಆದರ್ಶ, ಪವನ್, ಪ್ರವೀಣ್, ಸಂತು ಸೇರಿದಂತೆ ಇತರರು ಇದ್ದರು.