ತಿ.ನರಸೀಪುರ ತಾಲೂಕಿನ ಮಾದೇಗೌಡನ ಹುಂಡಿ ಗೇಟ್ ನಲ್ಲಿರುವ ಕಾವೇರಿ ನೀರಾವರಿ ನಿಗಮ ನಂ.4ರ ಕೆಆರ್‌ಎಸ್ ಉಪ-ವಿಭಾಗದ ಕಾವೇರಿಯ ಮುಂಭಾಗ ಬನ್ನೂರು ದೊಡ್ಡಕೆರೆ ತಳಭಾಗದ ಅಚ್ಚುಕಟ್ಟು ಪ್ರದೇಶದ ಕಿರು ನಾಲೆಗಳ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆಸುವಂತೆ ಎಇಇ ಲೋಹಿತ್ ಅವರಿಗೆ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು. ಹ ಅತ್ತಹಳ್ಳಿ ದೇವರಾಜ್, ಅರುಣ್ ಕುಮಾರ್,ಸಿ.ಲಿಂಗಣ್ಣ, ಗಿರಿರಾಜ್, ಸಿ.ಕುಮಾರ್, ಬೈರವ ಇತರರು ಇದ್ದರು.
ತಿ.ನರಸೀಪುರ : ತಾಲೂಕಿನ ಬನ್ನೂರು ದೊಡ್ಡಕೆರೆ ತಳಭಾಗದ ಅಚ್ಚುಕಟ್ಟು ಪ್ರದೇಶದ ಕೆರೆಯ ಎಡದಂಡೆ ನಾಲೆ, ಬಲದಂಡೆ ನಾಲೆ, ಮೂರ್ಖನಾಲೆ, ಹಾಗೂ ಸಿಡಿಎಸ್ ಬಡಾವಣೆ ನಾಲೆಗಳ ಒತ್ತುವರಿ ತೆರವುಗೊಳಿಸಿ, ಬೆಳೆದಿರುವ ಗಿಡಗಂಟೆ ಹಾಗೂ ತುಂಬಿರುವ ಹೂಳು ತೆಗೆಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಸೋಮವಾರ ಮಾದೇಗೌಡನ ಹುಂಡಿ ಗೇಟ್ ನಲ್ಲಿರುವ ಕಾವೇರಿ ನೀರಾವರಿ ನಿಗಮ ನಂ.4ರ ಕೆಆರ್‌ಎಸ್ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಮಾಡಿದ್ದಾರೆ.
ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಹಿತ್ ಅವರನ್ನು ಖುದ್ದಾಗಿ ಭೇಟಿಯಾದ ರೈತ ಮುಖಂಡರು
ಮಳೆಗಾಲದಲ್ಲಿ ನೀರು ಸರಾಗವಾಗಿ ಹಳ್ಳಗಳಲ್ಲಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಗಾಣಿಗನ ಕೊಪ್ಪಲು ಶ್ರೀ ವೆಂಕಟೇಶ್ವರ ದೇವಸ್ಥಾನದ ಹತ್ತಿರ ಇರುವ ದೋಣಿಕಲ್ಲು ಹೊಡ್ದು ಸಂಪೂರ್ಣ ಶಿಥಿಲವಾಗಿದ್ದು, ದುರಸ್ತಿ ಮಾಡಿ ಅನುಕೂಲ ಕಲ್ಪಿಸಬೇಕು. ಅಲ್ಲದೆ ಸಿಡಿ ಎಸ್ ನಾಲೆಯ ಬಿ.ಬೆಟ್ಟಹಳ್ಳಿ ಹತ್ತಿರ ಇರುವ ಎಸ್ಕೇಪ್ ಹಳ್ಳದ ಒತ್ತುವರಿ ತೆರವುಗೊಳಿಸಿ, ರೈತರ ಬೆಳೆಗಳ ಮೇಲೆ ನೀರು ನುಗ್ಗಿ ಬೆಳೆ ನಷ್ಟ ತಪ್ಪಿಸಲು, ಹಳ್ಳದಲ್ಲಿ ಸರಾಗವಾಗಿ ನೀರು ಹರಿಯುವಂತೆ ಆಧುನಿಕರಣ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಚಿಕ್ಕದೇವರಾಯ ಬಡಾವಣೆಯ ನಾಲೆಯ
ಬಿ ಬೆಟ್ಟಹಳ್ಳಿ ಗ್ರಾಮದ ಹತ್ತಿರ ಇರುವ ಎಸ್ಕೇಪ್ ಹಳ್ಳ ತುಂಬಾ ಒತ್ತುವರಿಯಾಗಿದ್ದು, ಗಿಡ ಗಂಟಿಗಳು ಹಾಗೂ ಹೂಳಿನಿಂದ ಮುಚ್ಚಿಕೊಂಡಿರುವ ಕಾರಣ ಮಳೆಗಾಲದಲ್ಲಿ ಎಸ್ಕೇಪ್ ಓಪನ್ ಮಾಡಿದಾಗ ರೈತರ ಜಮೀನುಗಳಿಗೆ ವಿಪರೀತ ನೀರು ನುಗ್ಗಿ ರೈತರ ಬೆಳೆಗಳು ಹಾಳಾಗಿ ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸಲು ಕಷ್ಟಕರವಾಗಿದೆ.ಇದೇ ರೀತಿ ಮೋರ್ಕನ ಕಾಲುವೆ ಹಳ್ಳ ಸಂಪೂರ್ಣವಾಗಿ ಒತ್ತುವರಿಯಾಗಿದ್ದು, ಮಳೆಗಾಲದಲ್ಲಿ ಅಕ್ಕಪಕ್ಕದ ಜಮೀನು ಸಂಪೂರ್ಣವಾಗಿ ಮುಳುಗಡೆಯಾಗುತ್ತಿವೆ, ಪ್ರತಿ ವರ್ಷವು ಇದರಿಂದ ಮಳೆಗಾಲದಲ್ಲಿ ಬೆಳೆ ಮುಳುಗಡೆ ಆಗಿ ಬೆಳೆ ಹಾನಿಯಿಂದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಗಾಣಿಗನಕೊಪ್ಪಲು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಪಕ್ಕ ಸೇತುವೆ ತಳ ಭಾಗದಲ್ಲಿ ನಂಜಯನ ಪುಟ್ಟರಾಜು ಜಮೀನು ಹತ್ತಿರ ಇರುವ ಹೊಡ್ದು ಹೊಡೆದು ಹೋಗಿದ್ದು ಇದು ದೋಣಿಕಲ್ಲು ಮುಖಾಂತರ ನೂರಾರು ಎಕರೆಗೆ ನೀರು ಪೂರೈಸುತ್ತದೆ, ಕಳೆದ 4 ವರ್ಷಗಳಿಂದ ಇದು ತಳಭಾಗದಲ್ಲಿ ನೀರಿನ ರಭಸಕ್ಕೆ ಹಾಳಾಗಿದ್ದು ನೀರು ನಿಲ್ಲದೆ ರೈತರು ಬೆಳೆ ಬೆಳೆಯಲು ತುಂಬಾ ತೊಂದರೆಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ತಮ್ಮ ಇಲಾಖೆಗೆ ದೂರು ನೀಡಿದ್ದರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ಮತ್ತು ಉಳು ತೆರವು ಗೋಳಿಸಿ ಇವುಗಳನ್ನ ಆಧುನಿಕರಣ ಮಾಡಿ ಮಳೆಗಾಲದಲ್ಲಿ ರೈತರ ಬೆಳೆಗಳ ಮೇಲೆ ನೀರು ನುಗ್ಗದೆ ಹಳ್ಳದಲ್ಲಿ ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅತ್ತಹಳ್ಳಿ ಅರುಣ್ ಕುಮಾರ್, ಸಿ.ಲಿಂಗಣ್ಣ, ಕೇತುಪುರ ಗಿರಿರಾಜ್, ಮೇಗಳಕೊಪ್ಪಲು ಸಿ.ಕುಮಾರ್, ಬನ್ನೂರು ಬೈರವ, ರಾಮ, ಚೇತನ್, ಸುನಿಲ್, ರಾಮಕೃಷ್ಣ, ಸ್ವಾಮಿ, ಕೃಷ್ಣಪ್ಪ ಹಾಗೂ ಹಲವು ರೈತರು ಇದ್ದರು.