ಮೈಸೂರು ಪೂರ್ವಭಾಗದ ಗ್ರಾಮ, ಬಡಾವಣೆಗಳ ಸೇರ್ಪಡೆಗೆ ಮನವಿ

ಮೈಸೂರು ಪೂರ್ವಭಾಗದ ಗ್ರಾಮ, ಬಡಾವಣೆಗಳನ್ನು ಬೃಹತ್ ಮೈಸೂರು ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಶರತ್ ಪುಟ್ಟಬುದ್ಧಿ, ಶಿವಕುಮಾರ್, ಕಿಶೋರ್‌ಬಿದ್ದಪ್ಪ, ಪ್ರವೀಣ್, ಸಿದ್ದಾರ್ಥ, ಲೋಹಿತ್, ಪುಟ್ಟಸ್ವಾಮಿ, ನರಸಯ್ಯ, ಸುಬ್ಬಣ್ಣ ಇತರರು ಇದ್ದರು.
ಮೈಸೂರು ಪೂರ್ವಭಾಗದ ಗ್ರಾಮ, ಬಡಾವಣೆಗಳನ್ನು ಬೃಹತ್ ಮೈಸೂರು ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. ಶರತ್ ಪುಟ್ಟಬುದ್ಧಿ, ಶಿವಕುಮಾರ್, ಕಿಶೋರ್‌ಬಿದ್ದಪ್ಪ, ಪ್ರವೀಣ್, ಸಿದ್ದಾರ್ಥ, ಲೋಹಿತ್, ಪುಟ್ಟಸ್ವಾಮಿ, ನರಸಯ್ಯ, ಸುಬ್ಬಣ್ಣ ಇತರರು ಇದ್ದರು.
Published on
ಮೈಸೂರು:ಬೃಹತ್ ಮೈಸೂರು ನಗರಪಾಲಿಕೆ ಸೇರ್ಪಡೆ ಹೋರಾಟ ಸಮಿತಿಯಿಂದ ಮೈಸೂರು ಪೂರ್ವಭಾಗದ ಗ್ರಾಮ, ಬಡಾವಣೆಗಳನ್ನು ಬೃಹತ್ ಮೈಸೂರು ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಮೈಸೂರು ಪೂರ್ವ ಭಾಗದಲ್ಲಿ ಬರುವ ವರುಣ ಹೋಬಳಿಯ ವ್ಯಾಪ್ತಿಯ ವರುಣ ಗ್ರಾಮ ಪಂಚಾಯಿತಿ, ಮೋಸಂಬಾಯನಹಳ್ಳಿ ಗ್ರಾಮ ಪಂಚಾಯಿತಿ, ವಾಜಮಂಗಲ ಗ್ರಾಮ ಪಂಚಾಯಿತಿ, ದೇವಲಾಪುರ ಗ್ರಾಮ ಪಂಚಾಯಿತಿ ಹಾಗೂ ಇದಕ್ಕೆ ಒಳಪಡುವ ಗ್ರಾಮಗಳು ಹಾಗೂ ಬಡಾವಣೆಗಳನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ಕೈ ಬಿಡಿರುವುದು ಸರಿಯಲ್ಲ ಎಂದು ಅಧಿಕೃತ ಆಕ್ಷೇಪಣೆಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.
ಅಧಿಕೃತ ಆಕ್ಷೇಪಣೆ ಪತ್ರವನ್ನು ಅಂಚೆ ಇಲಾಖೆ ಮೂಲಕ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪ ಚೋಳನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಅವರಿಗೆ ಕಳುಹಿಸಲಾಯಿತು.
ಆಕ್ಷೇಪಣೆ ಪತ್ರದ ಜತೆಗೆ ವರುಣ ಹೋಬಳಿಯ ಭಾಗದ 68 ಬಡಾವಣೆಗಳ ಪಟ್ಟಿಯನ್ನು ಬಡಾವಣೆ ಜನರ ಸಹಿಯೊಂದಿಗೆ ಸಲ್ಲಿಸಲಾಯಿತು.
ಸಮಿತಿಯ ಸದಸ್ಯ ಶರತ್ ಪುಟ್ಟಬುದ್ಧಿ, ಜಿಲ್ಲಾ ಪಂಚಾಯಿತಿ ಮಾಜಿ ಸಿಇಒ ಶಿವಕುಮಾರ್, ಮೈಸೆಂ ಇಂಜಿನಿಯರಿಂಗ್ ಕಾಲೇಜು ಟ್ರಸ್ಟಿ ಕಿಶೋರ್ ಬಿದ್ದಪ್ಪ, ಮುಖಂಡರಾದ ಪ್ರವೀಣ್, ಸಿದ್ಧಾರ್ಥ, ಲೋಹಿತ್, ಪುಟ್ಟಸ್ವಾಮಿ, ನರಸಯ್ಯ, ಸುಬ್ಬಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net