ಜನರ ನಂಬಿಕೆಗೆ ಮತ್ತೊಂದು ಹೆಸರೇ ‘ಕಾಮಧೇನು ಜ್ಯುಯಲರಿ’

ಅರಸು ರಸ್ತೆಯ ಕಾಮಧೇನು ಜ್ಯುಯಲರಿ
ಅರಸು ರಸ್ತೆಯ ಕಾಮಧೇನು ಜ್ಯುಯಲರಿ
Published on

ಪ್ರಮುಖ ಮುಖ್ಯಾಂಶಗಳು

  • ಸಿಂಘ್ವಿ ಕುಟುಂಬ ನಡೆದುಕೊಂಡು ಬರುತ್ತಿರುವ ಈ ‘ಕಾಮಧೇನು ಜ್ಯುಯಲರಿ’ ತನ್ನದೇ ಆದ ವಿಶೇಷತೆ ಹೊಂದಿದೆ
  • ಗ್ರಾಹಕರಿಗೆ ನೆಚ್ಚಿನ ಅಂಗಡಿ ಎಂಬ ಹೆಗ್ಗಳಿಕೆ
  • ಇಲ್ಲಿ ಎಲ್ಲ ಆಭರಣಗಳ ರಿಪೇರಿ ಸೇವೆ ಲಭ್ಯ
ಮೈಸೂರು: ಪರಿಶುದ್ಧ ಚಿನ್ನದ ಆಭರಣಗಳನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಹೆಸರುವಾಸಿಯಾಗಿರುವ ಮೈಸೂರಿನ ‘ಕಾಮಧೇನು ಜ್ಯುಯಲರಿ’ ಗ್ರಾಹಕರ ಅಭಿರುಚಿ ಮತ್ತು ಆರ್ಥಿಕತೆಗೆ ಅನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಜನತೆಗೆ ದೊರೆಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 
ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದಾಗಿದ್ದು, ನಂಬಿಕಸ್ಥರ ಹೂಡಿಕೆಯೂ ಆಗಿದೆ. ‘ಕಾಮಧೇನು ಜ್ಯುಯಲರಿ’ ಜನರ ನಂಬಿಕೆಯ ಮತ್ತೊಂದು ಹೆಸರಾಗಿದೆ. ಡಿ.ದೇವರಾಜ ಅರಸು ರಸ್ತೆಯ ಶ್ರೀ ಜಯದೇವಾಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಇಲ್ಲಿ ಗುಣಮಟ್ಟದ ಚಿನ್ನಾಭರಣಗಳು ಒಂದೇ ಸೂರಿನಡಿ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ನೆಚ್ಚಿನ ಕೇಂದ್ರವಾಗಿದೆ. 
ವಂಶಪಾರಂಪರ‌್ಯವಾಗಿ ನಡೆದುಕೊಂಡು ಬರುತ್ತಿರುವ ಈ ‘ಕಾಮಧೇನು ಜ್ಯುಯಲರಿ’  ತನ್ನದೇ ಆದ ವಿಶೇಷತೆ ಹೊಂದಿದೆ. ನಂಬಿಕೆ ಹಾಗೂ ವಿಶ್ವಾಸಕ್ಕೆ ಹೆಸರು ವಾಸಿಯಾಗಿರುವ ಇದು ಮೈಸೂರಿನ ದೊಡ್ಡ ಆಭರಣದ ಅಂಗಡಿಗಳಲ್ಲಿ ಒಂದು ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಬೆಳ್ಳಿ ಸಾಮಗ್ರಿಗಳ ಬೃಹತ್ ಸಂಗ್ರಹವಿರುವ ಆಭರಣದ ಮಳಿಗೆ ಎಂಬ ಖ್ಯಾತಿಯನ್ನೂ ಪಡೆದಿದೆ. 
ಮದುವೆ, ಇತರ ಶುಭ ಸಮಾರಂಭಗಳಿಗೆ ಬೇಕಾಗುವ ನವ ನವೀನ ಹಾಗೂ ಉತ್ತಮ ಕರಕುಶಲತೆಯಿಂದ ಕೂಡಿರುವ ಗುಣಮಟ್ಟದ ಚಿನ್ನಾಭರಣಗಳು, ವಜ್ರಾಭರಣಗಳು ದೊರೆಯಲಿವೆ. ಬೆಳ್ಳಿಯ ಪದಾರ್ಥಗಳು, ಎಲ್ಲ ಬಗೆಯ ಹರಳುಗಳು ಸಹ ಲಭ್ಯವಿವೆ.
1942ರಲ್ಲಿ ಟಿ.ಪುಖ್ರಾಜ್ ಜೀ ಸಿಂಘ್ವಿ ಅವರು ‘ಕಾಮಧೇನು ಜ್ಯುಯಲರಿ’ಯನ್ನು ಅಶೋಕ ರಸ್ತೆಯಲ್ಲಿ ಆರಂಭಿಸಿದರು. ನಂತರ ಅವರ ಮಗ ಉಮೇದ್ ರಾಜ್ ಸಿಂಘ್ವಿ ‘ಕಾಮಧೇನು ಜ್ಯುಯಲರಿ’ಯನ್ನು ಬೆಳೆಸಿದರು. ಇದೀಗ ಉಮೇದ್ ರಾಜ್ ಸಿಂಘ್ವಿ ಅವರ ಮಕ್ಕಳಾದ ರಾಜೇಶ್ ಸಿಂಘ್ವಿ ಮತ್ತು ಆನಂದ್ ಸಿಂಘ್ವಿ ಹಾಗೂ ಮೊಮ್ಮಕ್ಕಳು ಇದನ್ನು ಮುಂದುವರಿಸಿದ್ದಾರೆ. ಸಿಂಘ್ವಿ ಕುಟುಂಬದ ಐದು ತಲೆಮಾರು ‘ಕಾಮಧೇನು ಜ್ಯುಯಲರಿ’ಯನ್ನು ನೋಡಿಕೊಂಡಿಕೊಂಡು ಬಂದಿದ್ದಾರೆ. 
ರಾಜೇಶ್ ಸಿಂಘ್ವಿ ಮತ್ತು ಆನಂದ್ ಸಿಂಘ್ವಿ ಅವರು ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಈ ವ್ಯವಹಾರವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 2003 ರಿಂದ ‘ಕಾಮಧೇನು ಜ್ಯುಯಲರಿ’ ಡಿ.ದೇವರಾಜ ಅರಸು ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತುತ್ತಿದೆ.
ಗ್ರಾಹಕರ ಅಚ್ಚುಮೆಚ್ಚಿನ ಚಿನ್ನಾಭರಣದ ಹಳೆಯ ಅಂಗಡಿಯಾಗಿ ಹೊರಹೊಮ್ಮಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸಾವಿರಾರು ಗ್ರಾಹಕರನ್ನು ಹೊಂದಿದೆ.  ಮುಖ್ಯವಾಗಿ ಇಲ್ಲಿ ಅಭರಣಗಳ ಸರ್ವಿಸ್(ರಿಪೇರಿ) ಕೂಡ ಅಚ್ಚುಕಟ್ಟಾಗಿ ಮಾಡಿಕೊಡಲಾಗುತ್ತಿದೆ. ದೇವಸ್ಥಾನಗಳಿಗೆ ಬೆಳ್ಳಿ ಕೆಲಸಗಳನ್ನು ಕೂಡ ಮಾಡಿಕೊಡಲಾಗುತ್ತದೆ. ಈಗಾಗಲೇ ಒಂಟಿಕೊಪ್ಪಲಿನ ವೆಂಕಟೇಶ್ವರ ದೇವಸ್ಥಾನ, ಅರಸು ರಸ್ತೆಯ ಶ್ರೀ ಜಯದೇವಾಂಜನೇಯಸ್ವಾಮಿ ದೇವಸ್ಥಾನ ಸೇರಿ ನಾನಾ ಕಡೆ ಕೆಲಸ ಮಾಡಲಾಗಿದೆ.

ವಿವಿಧ ಸ್ಕೀಮ್ ಲಭ್ಯ

ಗ್ರಾಹಕರಿಗೆ ಅನುಕೂಲವಾಗುವಂತೆ 15 ತಿಂಗಳ ನಾನಾ ಸ್ಕೀಮ್ ವ್ಯವಸ್ಥ ಕಲ್ಪಿಸಲಾಗಿದೆ. 1 ಸಾವಿರದಿಂದ 1 ಲಕ್ಷ ರೂ. ಕಂತುಗಳ ನಾನಾ ಸ್ಕೀಮ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಗ್ರಾಹಕರಿಗೆ ಒಂದು ತಿಂಗಳ ಬೋನಸ್ ಕೂಡ ಲಭ್ಯ ಇದೆ. ಸ್ಕೀಮ್‌ಗಳಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡುಗಳು ಇವೆ. 
ಸಿಂಘ್ವಿ ಕುಟುಂಬ ‘ಕಾಮಧೇನು ಜ್ಯುಯಲರಿ’ಯಲ್ಲಿ 18 ಜನರಿಗೆ ಉದ್ಯೋಗ ನೀಡಿ, ಅವರ ಕುಟುಂಬ ನಿರ್ವಹಣೆಗೂ ನೆರವಾಗಿದೆ. ಗ್ರಾಹಕರು ಕಾಮಧೇನು ಜ್ಯುಯಲರಿ ಭೇಟಿ ನೀಡಿದ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂ. 0821-2422484/ 8123362569 ಸಂಪರ್ಕಿಸಬಹುದು.

ಅತ್ಯುತ್ತಮ ಬ್ರಾಂಡ್ ಆಭರಣಗಳ ತಯಾರಿಕೆಯಲ್ಲಿ ನಾವು ಮುಂಚೂಣಿಯಲ್ಲಿದ್ದು, ಗ್ರಾಹಕರ ಪರಿಕಲ್ಪನೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಗುಣಮಟ್ಟದಲ್ಲಿ ಯಾವುದೆ ರಾಜಿ ಮಾಡಿಕೊಳ್ಳದೆ ಪ್ರತಿಯೊಂದು ಆಭರಣವನ್ನು ಪ್ರಾಮಾಣಿಕವಾಗಿ ರಚಿಸಲಾಗುತ್ತದೆ. ಗ್ರಾಹಕರ ಹಿತದೃಷ್ಟಿಯಿಂದ ಚಿನ್ನ ಹಾಗೂ ವಜ್ರ ಖರೀದಿಗೆ ಎರಡು ಪ್ರಮುಖ ಯೋಜನೆಗಳನ್ನು ರೂಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net