ಪಕ್ಷದ ವಿರುದ್ಧ ವೈರತ್ವ ಸರಿಯಲ್ಲ: ಶಾಸಕ ತನ್ವೀರ್ ಸೇಠ್

ಶಾಸಕ ತನ್ವೀರ್ ಸೇಠ್
ಶಾಸಕ ತನ್ವೀರ್ ಸೇಠ್
Published on

ಪ್ರಮುಖ ಮುಖ್ಯಾಂಶಗಳು

  • ಟಿಕೆಟ್ ಸಂಘರ್ಷವನ್ನು ಬಹಳ ವೈಯಕ್ತಿಕವಾಗಿ ತೆಗೆದುಕೊಂಡು ಪಕ್ಷಕ್ಕೆ ನಷ್ಟ
ಮೈಸೂರು: ದಾವಣಗೆರೆ ಉಪ ಚುನಾವಣೆಗೆ ಮುಸ್ಲಿಮರು ಟಿಕೆಟ್ ಕೇಳಿದ್ದು ತಪ್ಪಲ್ಲ. ಪಕ್ಷವು ‘ಇಲ್ಲ’ ಎಂದ ಮೇಲೆ ಮುಗಿತು. ಅದರಲ್ಲಿ ವೈರತ್ವ ಸಾಧಿಸಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆಯಲ್ಲಿ ಆದ ಬೆಳವಣಿಗೆ ನಮ್ಮ ಕಣ್ತೆರೆಸಬೇಕು. ಜಾತಿಗಾಗಿ ಪಕ್ಷ ಅಲ್ಲ. ಸಿದ್ಧಾಂತಕ್ಕಾಗಿ ಪಕ್ಷ ಅನ್ನೊದು ನೆನಪಿರಲಿ ಎಂದು ಎಚ್ಚರಿಸಿದರು.
ಉಪಚುನಾವಣೆಯಲ್ಲಿ ಅನುಕಂಪ ಇದ್ದ ಕಡೆ ಟಿಕೆಟ್ ಕೊಡುತ್ತಾರೆ. ನಂಗೂ ಅನುಕಂಪದಿಂದಲೇ ಟಿಕೆಟ್ ಸಿಕ್ತು. ಯು.ಟಿ. ಖಾದರ್, ಕೃಷ್ಣಭೈರೇಗೌಡರಿಗೂ ಅನುಕಂಪದಲ್ಲೆ ಟಿಕೆಟ್ ಸಿಕ್ಕಿದ್ದು ಎಂದರು.
ಬಂಡಾಯಗಾರರನ್ನು ಸಂಧಾನ ಮಾಡಲು ಕೆಲವರಿಗೆ ಹೇಳಲಾಗಿತ್ತು. ಅವರು ಆ ಕೆಲಸ ಮಾಡಲಿಲ್ಲ. ಟಿಕೆಟ್ ಸಂಘರ್ಷವನ್ನು ಬಹಳ ವೈಯಕ್ತಿಕವಾಗಿ ತೆಗೆದುಕೊಂಡು ಪಕ್ಷಕ್ಕೆ ನಷ್ಟ ಮಾಡಿದರು.
 ಮತದಾರರಿಗೆ ಗೊಂದಲ ಸೃಷ್ಟಿಸಿ ಪಕ್ಷದ ನಾಯಕರಿಗೆ ಮುಜುಗರ ತಂದರು. ಈ ಗೊಂದಲದಿಂದ ಬಹಳಷ್ಟು ಜನ ಮತ ಹಾಕಲು ಬರಲಿಲ್ಲ ಎಂದು ಹೇಳಿದರು.
ಉದಯಿಸುತ್ತಿರುವ ಸೂರ್ಯಂಗೆ ಮಾತ್ರ ನಮಸ್ಕಾರ ಮಾಡುವ ಎಂಬ ಮನಸ್ಥಿತಿ ನಮ್ಮ ಪಕ್ಷದ ಕೆಲ ನಾಯಕರಿಗೆ ಇದೆ. ಬೆಂಕಿ ಪಕ್ಷ ಒಂದು ಕಡೆ, ನೀರಿನ ಪಕ್ಷ ಒಂದು ಕಡೆ. ನೀರಿನ ಪಕ್ಷದ ಜತೆ ಇದ್ದೇವೆ ಎಂದು ನೀರಿನಲ್ಲಿ ಮುಳುಗಲು ಸಾಧ್ಯವಿಲ್ಲ. ಮುಸ್ಲಿಮರ ಸ್ಥಿತಿ ಇದು ಎಂದು ಮಾರ್ಮಿಕವಾಗಿ ಹೇಳಿದರು.
ಶಾಮನೂರು ಕುಟುಂಬದ ಜತೆಗೆ ಮುಸ್ಲಿಂ ಸಮುದಾಯಕ್ಕೆ ಇದ್ದ ಬಾಂಧವ್ಯ ಕೆಡಿಸುವ ಪ್ರಯತ್ನ ಕೆಲವರು ಮಾಡಿದ್ದು ಸತ್ಯ. ಕೆಲವರಿಂದ ಗೊಂದಲ ಉಂಟು ಮಾಡಿ ಪಕ್ಷದ ನಾಯಕರಿಗೆ ಮುಜುಗರ ಮಾಡಿಸಿದ್ದು ಸತ್ಯ. ಈ ನಡುವೆಯೂ ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸುತ್ತಾರೆ. ಲೀಡ್ ಬಹಳ ಕಡಿಮೆ ಆಗಬಹುದಷ್ಟೇ ಎಂದು ವಿಶ್ಲೇಷಿಸಿದರು.
ಎರಡೂವರೆ ವರ್ಷ ಸಿಎಂ ಸ್ಥಾನ ಹಂಚಿಕೆ ಆಗಿದೆ ಎಂಬ ಮಾತಿತ್ತು. ಈಗ ಮೂರು ವರ್ಷಕ್ಕೆ ಬರುತ್ತಿದ್ದೇವೆ. ಈಗ ಸದ್ಯಕ್ಕೆ ಗಾಳಿ, ಸುಂಟರಗಾಳಿ ಎದ್ದಿದೆ. ಯಾರ‌್ಯಾರು ಏನೇನೂ ಆಗುತ್ತಾರೋ ಗೊತ್ತಿಲ್ಲ.
 ಮುಕ್ಕಾಲು ಪಾಲು ಈಗಿನ ಸಚಿವ ಸಂಪುಟಕ್ಕೆ ಸರ್ಜರಿ ಖಚಿತ. ನಾನು ಸಚಿವ ಸ್ಥಾನದ ಆಕಾಂಕ್ಷಿ. ನನ್ನನ್ನು ದೆಹಲಿಗೆ ಕರೆದಿದ್ದರು. ನಾನು ಹೋಗಿಲ್ಲ. ಹೋಗುವುದು ಇಲ್ಲ. ನಂಗೆ ನನ್ನದೆ ಆದ ತೂಕವಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net