ಅಂಬೇಡ್ಕರ್ ತತ್ವ, ಆದರ್ಶಗಳು ಇಂದಿಗೂ ಜೀವಂತ

ಕಂಪಲಾಪುರದ ಜೈಭೀಮ್ ಯುವಸೇನೆ ವತಿಯಿಂದ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ದಲಿತ ಮುಖಂಡ ತಮ್ಮಣ್ಣಯ್ಯ, ಐಲಾಪುರ ರಾಮು, ಪಡ್ಡೆ ಮಾದೇವ, ಲಕ್ಷ್ಮಣ್, ಯುವಸೇನೆ ಗೌರವಾಧ್ಯಕ್ಷ ಗಣೇಶ್, ಕಾರ್ತಿಕ್, ರಾಮು ಇತರರಿದ್ದರು.
ಕಂಪಲಾಪುರದ ಜೈಭೀಮ್ ಯುವಸೇನೆ ವತಿಯಿಂದ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ದಲಿತ ಮುಖಂಡ ತಮ್ಮಣ್ಣಯ್ಯ, ಐಲಾಪುರ ರಾಮು, ಪಡ್ಡೆ ಮಾದೇವ, ಲಕ್ಷ್ಮಣ್, ಯುವಸೇನೆ ಗೌರವಾಧ್ಯಕ್ಷ ಗಣೇಶ್, ಕಾರ್ತಿಕ್, ರಾಮು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಲಿತ ಮುಖಂಡ ಈ.ರಾಜ್ ಅಭಿಮತ
  • ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ
ಕಂಪಲಾಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳು ಮನುಕುಲಕ್ಕೆ ಅವಶ್ಯವಾಗಿದೆ ಎಂದು ದಲಿತ ಮುಖಂಡ ಈ.ರಾಜ್ ತಿಳಿಸಿದರು.
ಇಲ್ಲಿನ ಜೈ ಭೀಮ್ ಯುವ ಸೇನೆ ವತಿಯಿಂದ ಇತ್ತೀಚೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಮನೆಯಿಂದ ಹೊರ ಹೋಗಬೇಕಾದರೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮಸ್ಕರಿಸಿ ಹೋಗಬೇಕು. ಏಕೆಂದರೆ ಸಮಾಜದಲ್ಲಿ ನಾವು ಇಷ್ಟು ಸುಭಿಕ್ಷವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ಬಿ.ಆರ್.ಅಂಬೇಡ್ಕರ್. ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟ ಏಕೈಕ ವ್ಯಕ್ತಿ ಅಂಬೇಡ್ಕರ್. ಅವರು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಎಲ್ಲ ಸಮುದಾಯಕ್ಕೂ ಅನ್ವಯವಾಗುವಂತೆ ಸಂವಿಧಾನ ರಚಿಸಿದ್ದಾರೆ. ಆ ಕಾನೂನಿನ ಚೌಕಟ್ಟಿನ ಒಳಗಡೆ ನಾವು ಸುರಕ್ಷಿತವಾಗಿ ಬದುಕುತ್ತಿದ್ದೇವೆ ಎಂದರು.
ದಲಿತ ಮುಖಂಡ ಕೋಮಲಾಪುರ ಶಿವರಾಜ್ ಮಾತನಾಡಿ, ಭಾರತಕ್ಕೆ ಅಂಬೇಡ್ಕರ್ ಬೆಳಕಿದ್ದಂತೆ ದೈನಂದಿನ ಜೀವನದಲ್ಲಿ ನಾವು ಬದುಕನ್ನು ಬದಲಾವಣೆ ಮಾಡಿಕೊಳ್ಳಬೇಕು. ಹೋರಾಟದ ಕಿಚ್ಚು ಎಲ್ಲ ಸಮಾಜದಲ್ಲೂ ಇರುತ್ತೆ. ಬದುಕಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಇದ್ದಾಗ ಮಾತ್ರ ಜೀವನ ಸಾರ್ಥಕ ಎಂದು ತಿಳಿಸಿದರು.
ಮಹಾನಾಯಕರ ಜಯಂತಿಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ದೈನಂದಿನ ಬದುಕಿನಲ್ಲಿ ಅವರ ಆತ್ಮಕಥನಗಳನ್ನು ಅಳವಡಿಸಿಕೊಂಡಾಗ ಬೆಳಕಿನತ್ತ ಜೀವನ ಸಾಗುತ್ತದೆ. ಆ ಬೆಳಕೆ ಡಾ.ಬಿ.ಆರ್.ಅಂಬೇಡ್ಕರ್ ಎಂದರು.
ಪಿರಿಯಾಪಟ್ಟಣ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಐಲಾಪುರ ರಾಮು ಮಾತನಾಡಿ, ನಿರ್ಭಯ, ನಿಶ್ಚಿಂತೆಯಿಂದ ಒಬ್ಬ ಹೆಣ್ಣು ಮಗಳು ತಡರಾತ್ರಿ ಸುರಕ್ಷಿತವಾಗಿ ಮನೆ ಸೇರುತ್ತಾಳೆ ಎಂದರೆ ಅದಕ್ಕೆ ಮೂಲ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ. ಸಮಾಜದ ಮೂಢನಂಬಿಕೆ ಪದ್ಧತಿಗಳನ್ನು ಬದಿಗೊತ್ತಿ, ಮೂಲೆಗುಂಪಾಗಿದ್ದ ಸಮಾಜವನ್ನು ಮುಖ್ಯವಾಹಿನಿಗೆ ತಂದ ಏಕೈಕ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರು. ಪ್ರಾಮಾಣಿಕತೆಯಿಂದ ಓದಿ ಸಮಾಜದಲ್ಲಿ ಸುಧಾರಣೆ ತಂದ ಮಹಾನ್ ನಾಯಕರು, ಆದರೂ ಸರ್ಕಾರ ಇತ್ತೀಚೆಗೆ ಒಳ ಮೀಸಲಾತಿಯಿಂದ ನಮ್ಮ ಸಮಾಜಕ್ಕೆ ಸಿಗುವ ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಸಮಾಜದ ಹಿರಿಯ ಮುಖಂಡ ತಮ್ಮಣ್ಣಯ್ಯ, ವಕೀಲ ಭಾಸ್ಕರ್, ವಿದ್ಯಾರ್ಥಿನಿಯರಾದ ಕಾವ್ಯಾ ಹಾಗೂ ಛಾಯಾಶ್ರೀ ಅಂಬೇಡ್ಕರ್ ಅವರ ಜೀವನ ಚರಿತ್ರೆ ಬಗ್ಗೆ ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ಅತಿಥಿಗಳು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಂಜೆಯಿಂದ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ಸಹಕಾರ ಸಂಘದ ನಿರ್ದೇಶಕ ಕೆ.ಎಂ.ಲಕ್ಷ್ಮಣ್, ಗ್ರಾಪಂ ಮಾಜಿ ಅಧ್ಯಕ್ಷೆ ಜಾನಕಿ ವೆಂಕಟ್ ರಾಮು, ನಾಗ, ತಿಮಕಾಪುರ ಮಹದೇವ್, ಶಿವನಂಜಯ್ಯ, ಚಿಕ್ಕ ಯಜಮಾನ ನಟರಾಜ್, ದೇವೇಂದ್ರ, ಆನಂದ್, ಶಿಕ್ಷಕಿ ಅಭಿಲಾಷ, ಭಾವನಾ, ಜೈ ಭೀಮ್ ಯುವ ಸೇನೆಯ ಗೌರವಾಧ್ಯಕ್ಷ ಗಣೇಶ್, ಅಧ್ಯಕ್ಷ ಕಾರ್ತಿಕ್, ಟಿ.ವೆಂಕಟೇಶ್, ರಾಮು, ಚಂದನ್ ಪ್ರಸಾದ್, ರವಿಚಂದ್ರ, ಕೃಷ್ಣ, ಉಮೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net