ವ್ಯಕ್ತಿತ್ವ ಬೆಳೆಸಿಕೊಳ್ಳುವ ಜತೆಗೆ ಸಮಾಜದ ಋಣ ತೀರಿಸಬೇಕು: ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ ರಮೇಶ್

ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ.ಟಿ.ರಮೇಶ್, ಪ್ರೊ.ಪುಟ್ಟಶೆಟ್ಟಿ, ಡಾ.ಎಂ.ಎಸ್.ಅನಿತಾ, ಬಿ.ಎಸ್.ರತ್ನ, ಡಾ.ಸಿ.ಆರ್.ಕಿರಣ್ ಕುಮಾರ್ ಇತರರು ಇದ್ದರು.
ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ.ಟಿ.ರಮೇಶ್, ಪ್ರೊ.ಪುಟ್ಟಶೆಟ್ಟಿ, ಡಾ.ಎಂ.ಎಸ್.ಅನಿತಾ, ಬಿ.ಎಸ್.ರತ್ನ, ಡಾ.ಸಿ.ಆರ್.ಕಿರಣ್ ಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿಯಲ್ಲಿ ಯುವ ಪ್ರತಿಭೆಗಳ ಪಾತ್ರ ಸಾಕಷ್ಟಿದೆ. ಹಾಗಾಗಿ ಮನಸ್ಸು ಹರಿಯಬಿಡದೆ ಓದಿನಲ್ಲಿ ಆಸಕ್ತಿ ತೋರಿಬೇಕು
  • ಯುವ ಪ್ರತಿಭೆಗಳು ತಮ್ಮ ಕೌಶಲ ಅಭಿವೃದ್ಧಿಸಿಕೊಂಡು ಭವಿಷ್ಯದಲ್ಲಿ ಸಂಶೋಧನೆ ಮಾಡಿ ಸಮಾಜಕ್ಕೆ ನೀವು ಕೊಡುಗೆ ನೀಡಬೇಕು
ಮೈಸೂರು:ಅಧ್ಯಯನದಲ್ಲಿ ಆಸಕ್ತಿ ತೋರಿ ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳುವ ಜತೆಗೆ ಸಮಾಜದ ಋಣ ತೀರಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ ರಮೇಶ್ ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಾಪಕರ ಸಂಘ, ಮಹಾರಾಣಿ ಕಲಾ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅರ್ಥಶಾಸ್ತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮಾನ್ಯತೆ ಪಡೆದುಕೊಂಡಿದೆ ಇಂತಹ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು.
ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದ್ದು, ಇಂತಹ ದೇಶದಲ್ಲಿ ಯುವ ಜನಾಂಗ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಸಮಾಜದ ಋಣ ತೀರಿಸುವ ಮೂಲಕ ಈ ದೇಶದ ಅಭಿವೃದ್ಧಿಗೆ ಶ್ರಮಿಸಬೇಕುದೇಶದ ಅಭಿವೃದ್ಧಿಯಲ್ಲಿ ಯುವ ಪ್ರತಿಭೆಗಳ ಪಾತ್ರ ಸಾಕಷ್ಟಿದೆ. ಹಾಗಾಗಿ ಮನಸ್ಸು ಹರಿಯಬಿಡದೆ ಓದಿನಲ್ಲಿ ಆಸಕ್ತಿ ತೋರಿಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಪುಟ್ಟಶೆಟ್ಟಿ ಮಾತನಾಡಿ, ಇಂದಿನ ಯುವ ಪ್ರತಿಭೆಗಳು ತಮ್ಮ ಕೌಶಲ ಅಭಿವೃದ್ಧಿಸಿಕೊಂಡು ಭವಿಷ್ಯದಲ್ಲಿ ಸಂಶೋಧನೆ ಮಾಡಿ ಸಮಾಜಕ್ಕೆ ನೀವು ಕೊಡುಗೆ ನೀಡಬೇಕು ಎಂದರು.
ಪ್ರಸ್ತುತದಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ನಿರಂತರವಾಗಿ ಬೆಳವಣಿಗೆತ್ತಾ ಸಾಗುತ್ತಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಒಳ್ಳೆಯ ಉದ್ಯೋಗಗಳನ್ನು ಪಡೆದು ದೇಶದ ಆರ್ಥಿಕ ಅಭಿವೃದ್ಧಿಗೆ ತಾವೆಲ್ಲರೂ ಶ್ರಮಿಸುವಂತೆ ತಿಳಿಸಿದರು
ಪ್ರಾಂಶುಪಾಲೆ ಡಾ.ಎಂ.ಎಸ್.ಅನಿತಾ ಮಾತನಾಡಿ, ಪ್ರಸ್ತುತ ಸ್ಪರ್ಧಾ ಪ್ರಪಂಚದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಹೋರಾಟ ಮಾಡಬೇಕಾಗಿದೆ. ಆ ಹಿನ್ನೆಲೆಯಲ್ಲಿ ಕೌಶಲ ಹೆಚ್ಚಿಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಒಂದು ಗುಣಮಟ್ಟದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಮಹಾರಾಣಿ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಎಸ್.ರತ್ನ, ಮೈಸೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಸಿ.ಆರ್.ಕಿರಣ್ ಕುಮಾರ್, ಪ್ರಾಧ್ಯಾಪಕರಾದ ಡಾ. ಲೋಕೇಶ್, ಡಾ. ಮಾದಪ್ಪ, ಡಾ. ವಿಜಯಲಕ್ಷ್ಮಿ, ಸಹಾಯಕ ಪ್ರಾಧ್ಯಾಪಕಿ ಡಾ.ರತ್ನ, ಐಕ್ಯೂಎಸ್‌ಸಿ ಸಂಯೋಜಕ ಡಾ.ಆನಂದ್, ಡಾ. ಮಾನಸ, ಡಾ. ಸುರೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net