ರಾಜ್ಯ ಕಾನೂನು ಸೇವಾ ಆಯೋಗದ ಮಾಜಿ ಸದಸ್ಯ ವಿಠಲ್ ನಾಣಚ್ಚಿ ಮಾತನಾಡಿ, ರಾಜ್ಯದ 1500 ಹಾಡಿಗಳಲ್ಲಿ ವಾಸಿಸುವ 90ಸಾವಿರ ಆದಿವಾಸಿ ಕುಟುಂಬಗಳಿಗೂ ಅರಣ್ಯ ಹಕ್ಕುಕಾಯ್ದೆ ಅನ್ವಯ ಮಾನ್ಯ ಮಾಡಿ ಹಕ್ಕುಪತ್ರ ನೀಡಬೇಕಿದೆ. ಆದಿವಾಸಿಗಳಿಗೆ ಅರಣ್ಯ ಕಿರುಸಂಪನ್ಮೂಲ ದೊರಕುವಂತೆ ಮಾಡಲು ಹಣ ನಿಗದಿ ಪಡಿಸಿ. ಹಾಡಿ ಅರಣ್ಯ ಹಕ್ಕು ಸಮಿತಿಗಳು ಚಟುವಟಿಕೆಯಿಂದ ಕಾರ್ಯ ಮಾಡಲು ಪ್ರೇರೇಪಿಸಿ. ಬಕ್ಕಲು ಅರಣ್ಯ ಪ್ರದೇಶ, ರೈತರಭೂಮಿ, ಸಾರ್ವಜನಿಕ ಜಾಗಗಳಲ್ಲಿ, ಸರ್ಕಾರಿ ಜಾಗಗಳಲ್ಲಿ ಜೈವಿಕ ಇಂಧನ ಮರಗಳಾದ ಹೊಂಗೆ, ಹಿಪ್ಪೆ, ಬೇವು, ಸಿಮರೋಬ, ಸುರಹೊನ್ನೇ ಬೆಳೆಸಲು ಹಾಗೂ ಅವುಗಳ ಬೀಜ ಸಂಗ್ರಹ ಮಾಡಲು ಹಣ ನಿಗದಿ ಪಡಿಸಿ. ಇಂಧನ ಸ್ವಾವಲಂಬನೆಗೆ ನಾಂದಿ ಹಾಡಬೇಕಿದ್ದು ಮುಖ್ಯಮಂತ್ರಿಗಳು ಈ ವಿಷಯಗಳ ಕುರಿತು ಗಮನಿಸಲಿ ಎಂದು ಆಗ್ರಹಿಸಿದರು.