ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ಈ ವಾಹನ ಬಳಸಲಾಗುವುದು
112 ಹಾಗೂ ಚಾಮುಂಡಿ ಪಡೆ ವಾಹನಗಳೂ ಕರ್ತವ್ಯ ಮುಂದುವರಿಸಲಿವೆ
ಮೈಸೂರು:ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸಿದ್ಧಗೊಂಡಿರುವ ‘ಅಕ್ಕ’ ಪಡೆಗೆ ನಗರದಲ್ಲಿ ಚಾಲನೆ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಿರುವ ‘ಅಕ್ಕ’ ಪಡೆ ವಾಹನಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ತಮ್ಮ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ಈ ವಾಹನ ಬಳಸಲಾಗುವುದು ಎಂದು ಸೀಮಾ ಲಾಟ್ಕರ್ ತಿಳಿಸಿದರು.
ವಾಹನದಲ್ಲಿ ನಾಲ್ವರು ಮಹಿಳಾ ಸಿಬ್ಬಂದಿ ಹಾಗೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಲಿದ್ದು, ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಇದರೊಂದಿಗೆ 112 ಹಾಗೂ ಚಾಮುಂಡಿ ಪಡೆ ವಾಹನಗಳೂ ಕರ್ತವ್ಯ ಮುಂದುವರಿಸಲಿವೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಬಸವರಾಜು ಮಾತನಾಡಿ, ಇಲಾಖೆಯು ಪ್ರತಿ ಜಿಲ್ಲೆಗೆ ಹಾಗೂ ಕಮಿಷನರೇಟ್ ವ್ಯಾಪ್ತಿಗೆ ಒಂದೊಂದು ವಾಹನ ನೀಡಿದೆ. ಅದರೊಂದಿಗೆ ನಾಲ್ಕು ಹೋಂ ಗಾರ್ಡ್ ನಿಯೋಜಿಸಲಾಗುವುದು. ಅವರ ವೇತನದ ಖರ್ಚನ್ನೂ ನಮ್ಮ ಇಲಾಖೆ ಭರಿಸಲಿದೆ ಎಂದು ತಿಳಿಸಿದರು.