ಕನಿಷ್ಠ ವೇತನಕ್ಕೆ ಆಗ್ರಹಿಸಿ ಎಐಟಿಯುಸಿ ಪ್ರತಿಭಟನೆ

ಎಐಯುಟಿಯುಸಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಯಶೋದರ್, ಮುದ್ದುಕೃಷ್ಣ,   ಪಿ.ಎಸ್.ಸಂಧ್ಯಾ, ಹರೀಶ್, ಶಿವಾನಂದ್ ಇನ್ನಿತರರಿದ್ದರು.
ಎಐಯುಟಿಯುಸಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಯಶೋದರ್, ಮುದ್ದುಕೃಷ್ಣ, ಪಿ.ಎಸ್.ಸಂಧ್ಯಾ, ಹರೀಶ್, ಶಿವಾನಂದ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೋಯ್ಡ ಹಾಗೂ ಇತರ ಕಾರ್ಮಿಕರ ಹೋರಾಟ ಬೆಂಬಲ
  • ಕಾರ್ಮಿಕರ ಮೇಲಿನ ಎಲ್ಲ ದಮನಾತ್ಮಕ ಕ್ರಮ ನಿಲ್ಲಿಸಬೇಕು.
ಮೈಸೂರು: ನೋಯ್ಡ ಹಾಗೂ ಇತರ ಕಾರ್ಮಿಕರ ಹೋರಾಟ ಬೆಂಬಲಿಸಿ ಹಾಗೂ ಕಾರ್ಮಿಕರ ಮೇಲಿನ ದೌರ್ಜನ್ಯ ಖಂಡಿಸಿ, ರಾಜ್ಯದಲ್ಲೂ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ವತಿಯಿಂದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು 
 ಪ್ರತಿಭಟನೆ ನಡೆಯಿತು.
ಏ.9ರಂದು ನೋಯ್ಡ ಪ್ರದೇಶದ ಸುಮಾರು 50 ಸಾವಿರ ಕಾರ್ಮಿಕರು ಹಾಗೂ ಎನ್‌ಸಿಆರ್‌ನ ಅನೇಕ ಕೈಗಾರಿಕಾ ವಲಯಗಳ ಕಾರ್ಮಿಕರು ನ್ಯಾಯಸಮ್ಮತ ಹಕ್ಕುಗಳಿಗಾಗಿ ಹೋರಾಟ ನಡೆಸಿದರು.
 ಇದು ಹರಿಯಾಣ, ರಾಜಸ್ಥಾನ, ಗುಜರಾತ್, ಬಿಹಾರ ಸೇರಿದಂತೆ ದೇಶದ ಹಲವಾರು ಕೈಗಾರಿಕಾ ಕೇಂದ್ರಗಳಿಗೆ ವ್ಯಾಪಿಸಿದೆ. 
ಕಾರ್ಮಿಕರು ವೇತನ ಹೆಚ್ಚಳ, ದುಬಾರಿ ದರದಿಂದ ಉಂಟಾದ ಸಂಕಷ್ಟಕ್ಕೆ ಪರಿಹಾರ, ಅತಿಯಾದ ಕೆಲಸದ ಗಂಟೆಗಳ ವಿರುದ್ಧ, ಕಾನೂನುಬದ್ಧ ಓವರ್‌ಟೈಮ್, ವಾರದ ವಿಶ್ರಾಂತಿ, ಇಎಸ್‌ಐ, ಪಿಎಫ್, ಬೋನಸ್, ಉದ್ಯೋಗ ಭದ್ರತೆ, ಸುರಕ್ಷತಾ ಸೌಲಭ್ಯಗಳು ಹಾಗೂ ಗುತ್ತಿಗೆ ಕಾರ್ಮಿಕರ ಕಾಯಂ ಸೇರಿದಂತೆ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ.
 ಜತೆಗೆ, ಕಾರ್ಮಿಕರ ಹಕ್ಕುಗಳನ್ನು ಕುಂಠಿತಗೊಳಿಸುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಗಟ್ಟಿಯಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಕಾರ್ಮಿಕರ ಆಳವಾದ ಅಸಮಾಧಾನ ಮತ್ತು ಬದುಕಿನ ಸಂಕಷ್ಟವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಕಾರ್ಮಿಕರು ಹೋರಾಟ ಕಾರ್ಮಿಕರು ಸಜ್ಜಾಗಬೇಕು ಎಂದು ಹೇಳಿದರು.
ಎಐಯುಟಿಯುಸಿ ಜಿಲ್ಲಾ ಅಧ್ಯಕೆ ಯಶೋದರ್ ಮಾತನಾಡಿ, ನ್ಯಾಯಸಮ್ಮತ ಬೇಡಿಕೆ ಪರಿಹರಿಸುವ ಬದಲು ಸಂಬಂಧಿತ ರಾಜ್ಯ ಸರ್ಕಾರಗಳು ಕಾರ್ಮಿಕರ ಮೇಲೆ ನಿರ್ದಯ ದಮನ ಕ್ರಮಕ್ಕೆ ಮುಂದಾಗಿವೆ. ಕಾರ್ಮಿಕರ ಮೇಲೆ ಹಲ್ಲೆ, ಆಹಾರ ಮತ್ತು ನೀರು ಇಲ್ಲದೆ ಬಂಧನದಲ್ಲಿಡುವುದು. 
ಇವುಗಳೆಲ್ಲ ಸರ್ಕಾರದ ದೌರ್ಜನ್ಯ ಮತ್ತು ಕ್ರೂರತೆಯ ಸ್ಪಷ್ಟ ಉದಾಹರಣೆಗಳು. ಬಡ ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕಾದ ಸರ್ಕಾರವೇ ಅವರ ವಿರುದ್ಧ ದಾಳಿ ನಡೆಸುತ್ತಿರುವುದು ಮತ್ತು ಈ ಫ್ಯಾಸಿಸ್ಟ್ ಸ್ವಭಾವದ ದಾಳಿ ಖಂಡನೀಯ ಎಂದು ಹೇಳಿದರು
ಬೇಡಿಕೆಗಳು 
ಕಾರ್ಮಿಕರ ಮೇಲಿನ ಎಲ್ಲ ದಮನಾತ್ಮಕ ಕ್ರಮ ನಿಲ್ಲಿಸಬೇಕು. ಬಂಧಿತ ಎಲ್ಲ ಕಾರ್ಮಿಕರನ್ನು ಬಿಡುಗಡೆ ಮಾಡಬೇಕು. ಗಾಯಗೊಂಡ ಕಾರ್ಮಿಕರಿಗೆ ಸಮರ್ಪಕ ಪರಿಹಾರ ನೀಡಬೇಕು. ಕಾರ್ಮಿಕರ ಎಲ್ಲ ನ್ಯಾಯಸಮ್ಮತ ಬೇಡಿಕೆ ಪೂರೈಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ, ಮುಖಂಡರಾದ ಪಿ.ಎಸ್.ಸಂಧ್ಯಾ, ಹರೀಶ್, ಶಿವಾನಂದ್, ಅವಿನಾಶ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net