ವಕೀಲರ ಸಂಘದಿಂದ ಪ್ರತಿಭಟನೆ

 ಹುಣಸೂರು ನಗರದ ವಕೀಲರ ಸಂಘದ ಭವನದ ಮುಂಭಾಗ ತಾಲೂಕು ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಎಸ್.ಶಿವಣ್ಣೇಗೌಡ, ಭಾಸ್ಕರ್, ಸಿ.ಹರೀಶ್ ಕುಮಾರ್ ಇದ್ದರು.
ಹುಣಸೂರು ನಗರದ ವಕೀಲರ ಸಂಘದ ಭವನದ ಮುಂಭಾಗ ತಾಲೂಕು ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಎಸ್.ಶಿವಣ್ಣೇಗೌಡ, ಭಾಸ್ಕರ್, ಸಿ.ಹರೀಶ್ ಕುಮಾರ್ ಇದ್ದರು.
Published on
ಹುಣಸೂರು: ರಾಜ್ಯಾದ್ಯಂತ ನ್ಯಾಯಾಲಯಗಳ ಆವರಣದಲ್ಲಿ ಭದ್ರತೆ ಹೆಚ್ಚಿಸುವಂತೆ ಆಗ್ರಹಿಸಿ ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ಬುಧವಾರ ನಡೆಯಿತು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ ಮಾತನಾಡಿ, ಎರಡು ದಿನಗಳ ಹಿಂದೆ ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಕಿಡಿಗೇಡಿಗಳು ಬಾಂಬ್ ಇರಿಸಿರುವ ಕುರಿತು ಸುಳ್ಳು ಸುದ್ದಿಹಬ್ಬಿಸಿ ಇಡೀ ಆಡಳಿತ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳಿಸಿದ್ದಾರೆ. ಇದರಿಂದಾಗಿ ಕರ್ತವ್ಯ ನಿರ್ವಹಿಸುವ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯದ ನಿರೀಕ್ಷೆಯಲ್ಲಿರುವ ಕಕ್ಷಿದಾರರು ತೊಂದರೆಗೊಳಗಾಗಿದ್ದಾರೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ರಾಜ್ಯ ಸರ್ಕಾರ ರಾಜ್ಯದ ಎಲ್ಲ ನ್ಯಾಯಾಲಯಗಳ ಆವರಣದಲ್ಲಿ ಮೆಟಲ್ ಡಿಟೆಕ್ಟರ್‌ಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಕದಂತಹ ಕ್ರಮಗಳನ್ನು ಕೈಗೊಂಡು ಎಲ್ಲರೂ ನಿರ್ಭಯರಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಸಿ.ಹರೀಶ್‌ಕುಮಾರ್, ಭಾಸ್ಕರ್, ವೀರೇಶ್ ರಾವ್ ಬೋಬಡೆ , ಶ್ರೀನಿವಾಸ್, ಕವಿತಾ, ಕೆ.ಆರ್.ಮಂಜುನಾಥ್ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net