ಕೃಷಿಯೊಂದಿಗೆ ಉಪ ಕಸುಬುಗಳನ್ನು ಅಳವಡಿಸಿಕೊಳ್ಳಿ

ಸರಗೂರು ಜಯ ಚಾಮರಾಜೇಂದ್ರ ಕ್ರೀಡಾಂಗಣದಲ್ಲಿ  ಆಯೋಜಿಸಿರುವ ಮೂರು ದಿನಗಳ ಬೃಹತ್ ಕೃಷಿ ಮೇಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚೈತ್ರಾಸ್ವಾಮಿ ಚಾಲನೆ ನೀಡಿದರು.ಜಿ.ಎಚ್.ಮಂಜುನಾಥ್, ಕೆ.ಎಸ್.ಶ್ರೀನಿವಾಸ್, ಡಾ.ಸಂತೋಷ್ ಒಡೆಯರ್ ಇದ್ದರು.
ಸರಗೂರು ಜಯ ಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ಬೃಹತ್ ಕೃಷಿ ಮೇಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚೈತ್ರಾಸ್ವಾಮಿ ಚಾಲನೆ ನೀಡಿದರು.ಜಿ.ಎಚ್.ಮಂಜುನಾಥ್, ಕೆ.ಎಸ್.ಶ್ರೀನಿವಾಸ್, ಡಾ.ಸಂತೋಷ್ ಒಡೆಯರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾಸ್ವಾಮಿ ಸಲಹೆ
ಸರಗೂರು: ರೈತರು ಕೃಷಿಯೊಂದಿಗೆ ಉಪ ಕಸುಬುಗಳನ್ನು ಅಳವಡಿಸಿಕೊಂಡಾಗ ಮಾತ್ರ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರಾಸ್ವಾಮಿ ತಿಳಿಸಿದರು.
ಪಟ್ಟಣದ ಜಯ ಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ಬೃಹತ್ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ಕೃಷಿ ಮೇಳ ಆಯೋಜಿಸಿತ್ತ ಬಂದಿರುವ ಸಂಸ್ಥೆಯು ರೈತರಿಗೆ ಬೆನ್ನೆಲುಬಾಗಿ ನಿಂತಿದೆ ಎಂದರು.
ಜಿಲ್ಲಾ ಪಶು ವೈದ್ಯಕೀಯ ಸೇವೆ ಇಲಾಖೆ ಉಪನಿರ್ದೇಶಕ ಡಾ.ನಾಗರಾಜು ಮಾತನಾಡಿ, ಗ್ರಾಮೀಣ ಜನರ ಬದುಕನ್ನು ಅಸನಾಗಿಸುವಲ್ಲಿ ಹೈನುಗಾರಿಕೆ ಹಾಗೂ ಸಮಗ್ರ ಬೇಸಾಯ ಬಹಳ ಮುಖ್ಯ ಎಂದು ಹೇಳಿದರು.
ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳ ನಿಕಟಪೂರ್ವ ಸಲಹೆಗಾರ ಡಾ.ಎಂ.ಎ. ಬಾಲಸುಬ್ರಮಣ್ಯ ಮಾತನಾಡಿ,
ರೈತರೆ ತಮ್ಮ ಜಮೀನಿಗೆ ವಿಜ್ಞಾನಿಗಳಾಗಬೇಕು. ಸಮಗ್ರ ಬೇಸಾಯವನ್ನು ಅಳವಡಿಸಿಕೊಂಡು ಉತ್ತಮ ಆದಾಯವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.
ವಿವೇಕಾನಂದ ಯೂತ್ ಮೂವ್ ಮೆಂಟ್ ಸಾಮಾಜಿಕ ಆರ್ಥಿಕ ಸಬಲೀಕರಣ ವಿಭಾಗದ ನಿರ್ದೇಶಕ ಡಾ.ಡೆನ್ನಿಸ್ ಚೌಹಾಣ್ ಮಾತನಾಡಿದರು.
ಜಿಲ್ಲಾ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಎಚ್.ಮಂಜುನಾಥ್, ಮೀನುಮರಿ ಉತ್ಪಾದನಾ ಮತ್ತು ಪಾಲನಾ ಕೇಂದ್ರದ ಉಪನಿರ್ದೇಶಕ ಕೆ.ಎಸ್.ಶ್ರೀನಿವಾಸ್, ಕುಕ್ಕುಟ ಮಹಾಮಂಡಳದ ಸಹಾಯಕ ನಿರ್ದೇಶಕ ಡಾ.ಸಂತೋಷ್ ಒಡೆಯರ್, ಪಿ.ಡಿ. ನಾಯಕ್, ಅಪ್ರೋಜ್, ಚಿನ್ಹಮಹದೇವು ಇತರರು ಇದ್ದರು.
ಇದೇ ಸಂದರ್ಭದಲ್ಲಿ ರೇಷ್ಮೆ ಕೃಷಿ, ಕೋಳಿ ಸಾಕಾಣಿಕೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net