ಕಿತ್ತೂರು ಗ್ರಾಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ಆದಿಶಕ್ತಿ ಕಿತ್ತೂರಮ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉತ್ಸವಮೂರ್ತಿ ಮೆರವಣಿಗೆ
ಕಿತ್ತೂರು: ಶ್ರೀ ದುರ್ಗಾಪರಮೇಶ್ವರಿ ಆದಿಶಕ್ತಿ ಕಿತ್ತೂರಮ್ಮ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಸಕಲ ಸಿದ್ಧತೆಗಳನ್ನು 18 ಗ್ರಾಮದ ಎಲ್ಲ ಕೋಮಿನ ಜನರು ಒಂದೆಡೆ ಸೇರುವ ಮೂಲಕ ರಥೋತ್ಸವಕ್ಕೆ ಬೇಕಾಗುವ ಎಲ್ಲ ಕೆಲಸಗಳನ್ನು ಸಹಕಾರ ಮನೋಭಾವನೆಯಿಂದ ನೆರವೇರಿಸಿದರು.
ಬುಧವಾರ ಹತ್ತಿರದ ಪುಣ್ಯಕ್ಷೇತ್ರವಾದ ಚುಂಚನಕಟ್ಟೆಯ ಕಾವೇರಿ ಹೊಳೆಯಲ್ಲಿ ಮಡಿಮಾಡಿ ಉತ್ಸವಮೂರ್ತಿಗೆ ಪೂಜಾ ವಿಧಾನ, ಹೋಮ-ಹವನಗಳನ್ನು ನೆರವೇರಿಸಲಾಯಿತು. ಬಳಿಕ ಮೆರವಣಿಗೆ ಮೂಲಕ ಕಿತ್ತೂರು ಗ್ರಾಮಕ್ಕೆ ತಂದು ದೇವಸ್ಥಾನದಲ್ಲಿ ಕೂರಿಸಲಾಯಿತು.
ಬಳಿಕ ದೇವಾಲಯದಿಂದ ಉತ್ಸವಮೂರ್ತಿಯನ್ನು ಮೆರವಣಿಗೆ ನಡೆಸಿ ರಥದಲ್ಲಿ ಕೂರಿಸಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥಕ್ಕೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.
ಸಚಿವ ಕೆ.ವೆಂಕಟೇಶ್ ಮತ್ತು ಗ್ಯಾರಂಟಿ ಅನುಷ್ಠಾನ ಯೋಜನೆ ಅಧ್ಯಕ್ಷ ನಿತಿನ್ ವೆಂಕಟೇಶ್ ಅಭಿಮಾನಿ ಬಳಗದ ವತಿಯಿಂದ ಹಾಗೂ ಅಂಗಡಿ ಮಾಲೀಕರು ಭಕ್ತರಿಗೆ ಪಾನಕ ಮಜ್ಜಿಗೆ ವಿತರಣೆ ಮಾಡಿದರು.