ಮೈಸೂರಿನಲ್ಲಿ ಮ್ಯಾಂಡೋಲಿನ್ ಎನ್.ಎಸ್.ಪ್ರಸಾದ್‌ಗೆ ಗಾನನಮನ

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಘಟಕ, ನಿತಿನ್ಸ್ ನಾದಾಮೃತ ಸ್ಕೂಲ್ ಆಫ್ ಮ್ಯೂಸಿಕ್‌ನಿಂದ ನಗರದಲ್ಲಿ ಮ್ಯಾಂಡೋಲಿನ್ ಪ್ರಸಾದ್ ಅವರ ನಿಧನಕ್ಕೆ  ಶ್ರದ್ದಾಂಜಲಿ ಸಲ್ಲಿಸಲಾಯಿತು. ಡಾ. ನಾಗರಾಜ್ ವಿ. ಬೈರಿ, ಜಯಪ್ಪ ಹೊನ್ನಾಳಿ,  ಡಾ. ಸಂತೋಷ್ ಚೊಕ್ಕಾಡಿ, ನಿತಿನ್ ರಾಜಾರಾಮ್ ಶಾಸ್ತ್ರಿ, ರಶ್ಮಿ ಚಿಕ್ಕಮಗಳೂರು, ದಿವ್ಯಾ ಸಚ್ಚಿದಾನಂದ ಇತರರು ಇದ್ದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಘಟಕ, ನಿತಿನ್ಸ್ ನಾದಾಮೃತ ಸ್ಕೂಲ್ ಆಫ್ ಮ್ಯೂಸಿಕ್‌ನಿಂದ ನಗರದಲ್ಲಿ ಮ್ಯಾಂಡೋಲಿನ್ ಪ್ರಸಾದ್ ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಡಾ. ನಾಗರಾಜ್ ವಿ. ಬೈರಿ, ಜಯಪ್ಪ ಹೊನ್ನಾಳಿ, ಡಾ. ಸಂತೋಷ್ ಚೊಕ್ಕಾಡಿ, ನಿತಿನ್ ರಾಜಾರಾಮ್ ಶಾಸ್ತ್ರಿ, ರಶ್ಮಿ ಚಿಕ್ಕಮಗಳೂರು, ದಿವ್ಯಾ ಸಚ್ಚಿದಾನಂದ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಚನಾಧಾರಿತ ಭಾವಪೂರ್ಣ ನೃತ್ಯ ನಮನ ಅರ್ಪಣೆ
  • ಎನ್. ಎಸ್. ಪ್ರಸಾದ್ ಅವರ ಹೊಸ ಸಂಗೀತ ಸಂಯೋಜನೆಯ ರವೀಂದ್ರಗಾನ ಪ್ರಸ್ತುತಿ

ಮೈಸೂರು:

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಘಟಕ, ನಿತಿನ್ಸ್ ನಾದಾಮೃತ ಸ್ಕೂಲ್ ಆಫ್ ಮ್ಯೂಸಿಕ್‌ನಿಂದ ನಗರದಲ್ಲಿ ಖ್ಯಾತ ಸಂಗೀತ ಸಂಯೋಜಕರಾದ ಮ್ಯಾಂಡೋಲಿನ್ ಎನ್.ಎಸ್. ಪ್ರಸಾದ್ (ಮ್ಯಾಂಡೋಲಿನ್ ಪ್ರಸಾದ್) ಅವರ ನಿಧನಕ್ಕೆ ಗಾನನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹೂಟಗಳ್ಳಿ ಕೆಎಚ್‌ಬಿ ಕಾಲನಿಯಲ್ಲಿರುವ ಶ್ರೀಅನಂತೇಶ್ವರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ನವ್ಯತಾ ದೇವರಾಜು ಅವರು ವಚನಾಧಾರಿತ ಭಾವಪೂರ್ಣ ನೃತ್ಯ ನಮನ ಅರ್ಪಿಸಿದರು. ಗಣ್ಯರು, ಗಾಯಕರು, ವಾದ್ಯಕಲಾವಿದರು, ಸಂಗೀತ ವಿದ್ಯಾರ್ಥಿಗಳು ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಿತಿನ್ಸ್ ನಾದಾಮೃತ ಸಂಗೀತ ಶಾಲೆಯ ವಿದ್ಯಾರ್ಥಿಗಳು ಎನ್. ಎಸ್. ಪ್ರಸಾದ್ ಅವರ ಹೊಸ ಸಂಗೀತ ಸಂಯೋಜನೆಯ ರವೀಂದ್ರಗಾನ ಗೀತೆಗಳನ್ನು ಪ್ರಸ್ತುತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಯೋಜಕರಾದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಘಟಕದ ಅಧ್ಯಕ್ಷ ಡಾ. ನಾಗರಾಜ್ ವಿ. ಬೈರಿ, ಪ್ರಸಾದ್ ಅವರೊಂದಿಗೆ ತಮಗಿದ್ದ ಆತ್ಮೀಯ ಸಂಬಂಧವನ್ನು ಸ್ಮರಿಸಿದರು.ಕೇವಲ ಎರಡು ತಿಂಗಳ ಹಿಂದಷ್ಟೇ ಇದೇ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಕಲಿಕಾ ಕಾರ್ಯಾಗಾರದಲ್ಲಿ ಮ್ಯಾಂಡೋಲಿನ್ ಪ್ರಸಾಸ್ ಅವರು ತುಂಬಿದ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತದ ಪಾಠ ಹೇಳಿಕೊಟ್ಟಿದ್ದರು ಎಂದು ನೆನಪಿಸಿಕೊಂಡರು.
ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ಘಟಕದ ಅಧ್ಯಕ್ಷ ಜಯಪ್ಪ ಹೊನ್ನಾಳಿ ಮಾತನಾಡಿ, ಮ್ಯಾಂಡೋಲಿನ್ ಪ್ರಸಾದ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಸಿ. ಅಶ್ವತ್ಥ್ ಅವರ ನಡುವಿನ ಮಧುರ ಬಾಂಧವ್ಯವನ್ನು ವಿವರಿಸಿದರು.
ಕನ್ನಡ ಪ್ರಾಧ್ಯಾಪಕ ಡಾ. ಸಂತೋಷ್ ಚೊಕ್ಕಾಡಿ, ತಮ್ಮ ಹಲವಾರು ಗೀತೆಗಳಿಗೆ ಎನ್.ಎಸ್. ಪ್ರಸಾದ್ ಸಂಗೀತ ಸಂಯೋಜಿಸಿದ ಸಂದರ್ಭಗಳನ್ನು ನೆನಪಿಸಿಕೊಂಡರು.
ನಿತಿನ್ ರಾಜಾರಾಮ್ ಶಾಸ್ತ್ರಿ ನೇತೃತ್ವದಲ್ಲಿ ನಡೆದ ಗೀತ ನಮನದಲ್ಲಿ ಅಮೃತಾ ನಿತಿನ್ ಶಾಸ್ತ್ರೀ, ರಶ್ಮಿ ಚಿಕ್ಕಮಗಳೂರು, ದಿವ್ಯಾ ಸಚ್ಚಿದಾನಂದ, ರೇವತಿ ಶರ್ಮ, ಬಿ.ಆರ್.ಶ್ರೀಧರ , ಮಹೇಶ್ ಪ್ರಿಯದರ್ಶನ್, ವಿ.ಎಸ್.ಶ್ರುತಿ , ಎಂ.ಎಸ್.ಶ್ರೀಕ್ಷಾ, ಭವ್ಯಾ ಹೆಬ್ಬಾಳೆ, ಸ್ನೇಹಾ ತಳೂರು, ನಾದಾಮೃತ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಸಾದ್ ಅವರ ಸಂಗೀತ ಸಂಯೋಜನೆಯ ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಅವರ ಸ್ಮರಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net