

ದಸರಾ ಅಂಗವಾಗಿ ಮೊದಲ ಬಾರಿಗೆ ಆಯೋಜಿಸಿರುವ ಕಂಬಳ ಕ್ರೀಡೆಯನ್ನು ಯಾವುದೇ ವಿರೋಧಕ್ಕೆ ಮಣಿಯದೆ ಅದ್ದೂರಿಯಾಗಿ ನಡೆಸಬೇಕೆಂದು ಒತ್ತಾಯಿಸಿ ದಲಿತ ಮಹಾ ಸಭಾದಿಂದ ಚಿಕ್ಕ ಗಡಿಯಾರದ ಬಳಿ ಪ್ರತಿಭಟನೆ ನಡೆಸಲಾಯಿತು.
ದಲಿತ ಮಹಾಸಭಾ ನಗರಾಧ್ಯಕ್ಷ ಎಸ್.ರಾಜೇಶ್ ಮಾತನಾಡಿ, ಕಂಬಳ ಕೇವಲ ಒಂದು ಕ್ರೀಡೆಯಷ್ಟೇ ಅಲ್ಲದೆ, ಕೃಷಿ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಬೆಸೆದುಕೊಂಡಿರುವ ದೇಶಿ ಕ್ರೀಡೆ. ಪ್ರಸ್ತುತ ರಾಜ್ಯದಲ್ಲಿ 27 ಆಧುನಿಕ ಹಾಗೂ 7 ಪಾರಂಪರಿಕ ಕಂಬಳಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಹೈಕೋರ್ಟ್ ಸಹ ಕಂಬಳ ನಡೆಸಲು ಅನುಮತಿ ನೀಡಿದೆ.
ಬೆಂಗಳೂರಿನಲ್ಲಿ ನಡೆದಾಗ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಅದೇ ಮಾದರಿಯಲ್ಲಿ ಕಲಾ ನಗರಿ ಹಾಗೂ ಫ್ಯಾಷನ್ ನಗರಿಯಾದ ಮೈಸೂರಿನಲ್ಲೂ ಕಂಬಳಕ್ಕೆ ಆಧುನಿಕ ಸ್ಪರ್ಶ ನೀಡಿ ಆಯೋಜನೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುನಿಲ್ ನಾರಾಯಣ, ಬಾಬು, ಸೈಯದ್ ಫಾರೂಕ್, ಬಿ.ಬಿ.ಕೇಶವ, ಕುಕ್ಕರಹಳ್ಳಿ ನಂಜುಂಡಸ್ವಾಮಿ, ಎಸ್.ಎ.ರಹೀಂ, ರಂಗಸ್ವಾಮಿ, ಸುನೀಲ್ ಬುದ್ಧ, ರಾಮು, ಜಾಫರ್, ರವಿನಾಯಕ್ ಇತರರು ಇದ್ದರು.