ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಪ್ರತಿಭಟನೆ

* ರಾಜ್ಯ ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರ, ರೈತ ಸಂಘ ಆಕ್ರೋಶ
A protest was held in the city on Thursday by the Karnataka State Sugarcane Growers Association and Karnataka State Farmers Association condemning the hike in KSRTC bus fares. Hallikerehundi Bhagyaraj, Lagere Ganesh, Kerehundi Rajanna, Pandavapura Navid, Basavaraj, Maliyur Mahendra, Kasuvinahalli Manjesh, Devirammanahalli Hundi Mahesh, Revanna and others were present.
ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘ, ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ಹಳ್ಳಿಕೆರೆಹುಂಡಿ ಭಾಗ್ಯರಾಜ್, ಳಗೆರೆ ಗಣೇಶ್, ಕೆರೆಹುಂಡಿ ರಾಜಣ್ಣ, ಪಾಂಡವಪುರ ನವೀದ್, ಬಸವರಾಜ್, ಮಲಿಯೂರು ಮಹೇಂದ್ರ, ಕಸುವಿನಹಳ್ಳಿ ಮಂಜೇಶ್, ದೇವಿರಮ್ಮನಹಳ್ಳಿ ಹುಂಡಿ ಮಹೇಶ್, ರೇವಣ್ಣ ಇತರರಿದ್ದರು.
Published on: 

ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘ, ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಗರದ ಸಬರ್ಬನ್ ಬಸ್ ನಿಲ್ದಾಣದ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ರಸ್ತೆ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ನಾನಾ ಘೋಷಣೆ ಕೂಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಭರವಸೆ ನೀಡಿ ಮುಗ್ಧ ಮತದಾರರ ಮತ ಪಡೆದು ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ನೆಪದಲ್ಲಿ ಈಗ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ಟೀಕಿಸಿದರು.

ಸಾರಿಗೆ ಇಲಾಖೆಯ ಸುಮಾರು 24 ಸಾವಿರ ಕೋಟಿ ರೂ. ನಷ್ಟವನ್ನು ಸರಿದೂಗಿಸಲು ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಹಾಕುವುದು ಸರಿಯಲ್ಲ. ಇದು ಬಂಡೆ ಸರ್ಕಾರವಲ್ಲ, ಕತ್ತರಿ ಸರ್ಕಾರ. ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರ ಮತ ಹಾಕಿದ ಜನರಿಗೇ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ರೈತರು ಮತ್ತು ನಾಗರಿಕರು ಜಾಗೃತರಾಗಬೇಕು. ಹೆಚ್ಚುವರಿ ಬಸ್ ದರ ಪಾವತಿಸದೆ ತೆರಿಗೆ ನಿರಾಕರಣೆ ಸೇರಿದಂತೆ ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.

ಶಾಸಕರು, ಸಚಿವರು ಹಾಗೂ ಸಂಸದರು ತಮ್ಮ ವೇತನವನ್ನು ಹೆಚ್ಚಿಸಿಕೊಳ್ಳುವ ಬದಲು ಗ್ಯಾರಂಟಿ ಯೋಜನೆಗಳ ಹೊಣೆಯನ್ನು ತಮ್ಮ ವೇತನದಿಂದಲೇ ಭರಿಸಲಿ. ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕಿ ಸರ್ಕಾರ ನಡೆಸುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.

ಸಂಘದ ಪದಾಧಿಕಾರಿಗಳಾದ ವಳಗೆರೆ ಗಣೇಶ್, ಕೆರೆಹುಂಡಿ ರಾಜಣ್ಣ, ಪಾಂಡವಪುರ ನವೀದ್, ಬಸವರಾಜ್, ಮಲಿಯೂರು ಮಹೇಂದ್ರ, ಕಸುವಿನಹಳ್ಳಿ ಮಂಜೇಶ್, ದೇವಿರಮ್ಮನಹಳ್ಳಿ ಹುಂಡಿ ಮಹೇಶ್, ರೇವಣ್ಣ, ಇಸ್ರಾ ಖಾನ್, ಮಹೇಶ್, ಮುದ್ದಳ್ಳಿ ಮಧು, ಗೌಡಿಕೆ ಶಿವಣ್ಣ ಇದ್ದರು.