ಉಚಿತ ಭಾಗ್ಯಗಳಿಗೆ ಹಣ ಹೊಂದಿಸಲಾಗದ ಸರ್ಕಾರ

A protest was held in the city on Thursday by the Karnataka Army to condemn the increase in bus fares.
ಬಸ್ ಪ್ರಯಾಣ ದರ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ತೇಜೇಶ್ ಲೋಕೇಶ್ ಗೌಡ, ಪ್ರಭುಶಂಕರ್, ಸಂತೋಷ್, ಸಿಂಧುವಳ್ಳಿ ಶಿವಕುವಾರ್, ಕುವಾರ್ ಗೌಡ, ಶಂಕರ್, ದರ್ಶನ್ ಗೌಡ, ರಾಧಾಕೃಷ್ಣ, ಸುಜಾತಾ, ನಾಗೇಂದ್ರ, ಗಿರೀಶ್, ರಘು ಅರಸ್, ಮಧು, ಬೋಗಾದಿ ಸಿದ್ದೇಗೌಡ, ಪ್ರಭಾಕರ ಇದ್ದರು.
Published on: 

ರಾಜ್ಯ ಸರ್ಕಾರ ಸಾರಿಗೆ ಬಸ್ ಪ್ರಂಾಣ ದರವನ್ನು ಹೆಚ್ಚಿಸಿರುವ ಕ್ರಮ ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ನಗರದ ಸಿಟಿ ಬಸ್ ನಿಲ್ದಾಣದ ಮುಂಭಾಗ ಜಮಾವಣೆಗೊಂಡ ಪ್ರತಿಭಟನಕಾರರು ವಿವಿಧ ಘೋಷಣೆಗಳನ್ನು ಕೂಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾಡಿನ ಜನರಿಗೆ ಬೆಲೆ ಏರಿಕೆಂು ಶಾಕ್ ನೀಡುತ್ತಿದೆ. ಈಗಾಗಲೇ ಹಾಲಿನ ದರವನ್ನು ದಾಖಲೆ ಪ್ರವಾಣದಲ್ಲಿ ಹೆಚ್ಚಿಸಿರುವ ಸರ್ಕಾರ, ಇದೀಗ ದಿಢೀರನೆ ಸಾರಿಗೆ ಬಸ್ ಪ್ರಂಾಣ ದರವನ್ನೂ ಏರಿಸಿರುವುದು ಜನಸಾವಾನ್ಯರಿಗೆ ಗಾಂುದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭಾಗ್ಯಗಳ ಹೆಸರಿನಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುತ್ತಿದ್ದು, ಜನಸಾವಾನ್ಯರ ಬದುಕು ದುಸ್ತರವಾಗಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತೊಂದು ಹೊರೆ ಹೊರಿಸಿರುವುದು ಸರಿಂುಲ್ಲ. ಮಹಿಳೆಂುರಿಗೆ ಉಚಿತ ಬಸ್ ಪ್ರಂಾಣದ ಸೌಲಭ್ಯ ಕಲ್ಪಿಸಿ, ಪುರುಷ ಪ್ರಂಾಣಿಕರಿಂದ ಹೆಚ್ಚಿನ ದರ ವಸೂಲಿ ವಾಡುತ್ತಿರುವುದು ತಾರತಮ್ಯದ ಕ್ರಮವಾಗಿದೆ ಎಂದು ದೂರಿದರು.

ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ಬಸ್‌ಗಳಿಗೆ ಡೀಸೆಲ್ ಹಾಕಿಸಲೂ ಹಣದ ಕೊರತೆಯಿದೆ ಎಂದು ಸಾರಿಗೆ ಸಚಿವರೇ ಹೇಳುತ್ತಿರುವಾಗ, ಉಚಿತ ಪ್ರಂಾಣ ಂೋಜನೆ ಮುಂದುವರಿಸುವ ಮೂಲಕ ನಿಗಮಗಳನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ಉಚಿತ ಭಾಗ್ಯಗಳಿಗೆ ಹಣ ಹೊಂದಿಸಲಾಗದೆ ಸರ್ಕಾರ ಜನರ ಮೇಲೆ ಬೆಲೆ ಏರಿಕೆಂು ಹೊರೆ ಹೇರುತ್ತಿರುವುದು ಖಂಡನೀಂು. ಅವೈಜ್ಞಾನಿಕವಾಗಿ ಸಾರಿಗೆ ದರ ಹೆಚ್ಚಿಸಿರುವುದರಿಂದ ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರಿಗೆ ತೀವ್ರ ತೊಂದರೆಂಾಗಲಿದೆ ಎಂದು ಕಿಡಿಕಾರಿದರು.

ಸರ್ಕಾರ ಕೂಡಲೇ ಹೆಚ್ಚಿಸಿರುವ ಸಾರಿಗೆ ಬಸ್ ಪ್ರಂಾಣ ದರವನ್ನು ಹಿಂಪಡೆಂುಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪದಾಧಿಕಾರಿಗಳಾದ ಪ್ರಭುಶಂಕರ್, ಸಂತೋಷ್, ಸಿಂಧುವಳ್ಳಿ ಶಿವಕುವಾರ್, ಕುವಾರ್ ಗೌಡ, ಶಂಕರ್, ದರ್ಶನ್ ಗೌಡ, ರಾಧಾಕೃಷ್ಣ, ಸುಜಾತಾ, ನಾಗೇಂದ್ರ, ಗಿರೀಶ್, ರಘು ಅರಸ್, ಮಧು, ಬೋಗಾದಿ ಸಿದ್ದೇಗೌಡ, ಪ್ರಭಾಕರ ಇದ್ದರು.