ಸಚಿವ ಡಾ.ಯತೀಂದ್ರ ಹೇಳಿಕೆ ಖಂಡನೆ

* ಸೇವ್ ಹಿಂದೂ ಟೆಂಪಲ್ಸ್ ಸಂಘಟನೆಯಿಂದ ಅಂಚೆ ಪತ್ರ ಚಳವಳಿ
A postal campaign was conducted on Friday by the Save Hindu Temples organization. M.M. Nikhilesh, Raghavendra, Rudramurthy and others were present.
ಸೇವ್ ಹಿಂದೂ ಟೆಂಪಲ್ಸ್ ಸಂಘಟನೆ ವತಿಯಿಂದ ಶುಕ್ರವಾರ ಅಂಚೆ ಪತ್ರ ಚಳವಳಿ ನಡೆಸಲಾಯಿತು. ಎಂ.ಎಂ.ನಿಖಿಲೇಶ್, ರಾಘವೇಂದ್ರ, ರುದ್ರಮೂರ್ತಿ ಇತರರಿದ್ದರು.
Published on: 

ಮೈಸೂರು ರಾಜವಂಶಸ್ಥರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗಳನ್ನು ಖಂಡಿಸಿ, ಸೇವ್ ಹಿಂದೂ ಟೆಂಪಲ್ಸ್ ಸಂಘಟನೆ ವತಿಯಿಂದ ಶುಕ್ರವಾರ ಅಂಚೆ ಪತ್ರ ಚಳವಳಿ ನಡೆಸಲಾಯಿತು.

ನಗರದ ವಿಜಯನಗರ 4ನೇ ಹಂತದ ವಿ.ವಿ.ಮೊಹಲ್ಲಾದ ಅಂಚೆ ಕಚೇರಿ ಬಳಿ ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು ವಿವಿಧ ಘೋಷಣೆಗಳನ್ನು ಕೂಗಿ ಸಚಿವರ ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಸಂಸ್ಥಾನದ ಅರಸರು ನಾಡಿನ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳು, ಜನಪರ ಕಾರ್ಯಗಳು ಹಾಗೂ ರಾಜಮನೆತನದ ಇತಿಹಾಸವನ್ನು ವಿವರಿಸುವ ಪತ್ರಗಳನ್ನು ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅಂಚೆ ಮೂಲಕ ರವಾನಿಸಿದರು. ಪತ್ರಗಳ ಜತೆಗೆ ರಾಜಮನೆತನದ ಇತಿಹಾಸ ಮತ್ತು ಸಾಧನೆಗಳನ್ನು ಪರಿಚಯಿಸುವ ಪುಸ್ತಕಗಳನ್ನೂ ಕಳುಹಿಸಿಕೊಟ್ಟರು.

ಮೈಸೂರು ಸಂಸ್ಥಾನದ ಅರಸರು ನಾಡಿನ ಅಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ, ಕೆ.ಆರ್. ಆಸ್ಪತ್ರೆ ಸ್ಥಾಪನೆ ಸೇರಿದಂತೆ ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಐತಿಹಾಸಿಕ ಸಾಧನೆಗಳನ್ನು ಅರಿತುಕೊಳ್ಳದೆ ರಾಜಮನೆತನದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.

ಸಂಘಟನೆಯ ಸಂಸ್ಥಾಪಕ ಎಂ.ಎಂ.ನಿಖಿಲೇಶ್, ಪದಾಧಿಕಾರಿಗಳಾದ ರಾಘವೇಂದ್ರ, ರುದ್ರಮೂರ್ತಿ, ದಿನೇಶ್ ಗೌಡ, ಪ್ರವೀಣ್, ಶ್ರೀನಿವಾಸ್ ಇದ್ದರು.