ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರವನ್ನು ಜಯದೇವ ಹೃದ್ರೋಗ ಸಂಸ್ಥೆ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಉದ್ಘಾಟಿಸಿದರು. ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ, ಡಾ.ಎಂ.ಎ.ಶೇಖರ್, ಡಾ.ಎಸ್.ಜಿ.ಮಂಗಳಗಿ, ಡಾ.ಶ್ರೀವತ್ಸ, ಡಾ.ಲಕ್ಷ್ಮೀನಾರಾಯಣ ಶೆಣೈ, ಡಾ.ರಾಮಚಂದ್ರಶೆಟ್ಟಿ, ಅಂಶಿ ಪ್ರಸನ್ನಕುಮಾರ್ ಇದ್ದರು.
Published on:
Copied
Follow Us
ಮೈಸೂರು: ಜ್ಞಾನ, ವಿಜ್ಞಾನ ಮತ್ತು ತತ್ವಜ್ಞಾನ ಸಮ್ಮಿಲನವಾಗಿ, ವಿಶ್ವದ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದು ಖ್ಯಾತ ಮಕ್ಕಳ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಎಂದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಕೇಂದ್ರದ ಸೆಮಿನಾರ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಏಷಣ-2026, ಸಂಶೋಧನಾ ವಿಧಾನ, ಜೈವಿಕ ಅಂಕಿ ಅಂಶಗಳ ಕುರಿತು ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು. ನಳಂದ, ತಕ್ಷಶಿಲ ವಿವಿಗಳನ್ನು ನಾಶ ಮಾಡಿದರೂ ಆಯುರ್ವೇದ ಇವತ್ತಿಗೂ ಉಳಿದಿದೆ. ಪ್ರಧಾನಿ ಮೋದಿ ಅವರಿಂದಾಗಿ ಯೋಗ ಮತ್ತು ಆಯುರ್ವೇದಕ್ಕೆ ಸಾಕಷ್ಟು ಉತ್ತೇಜನ ಸಿಗುತ್ತಿದೆ. ಯಾವುದೇ ವಿಷಯದಲ್ಲಿ ಸಕಾರಾತ್ಮಕತೆ ಇರಬೇಕೆ ಹೊರತು ನಕಾರಾತ್ಮಕತೆ ಇರಬಾರದು ಎಂದು ಕಿವಿಮಾತು ಹೇಳಿದರು.
ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಮಾತನಾಡಿ, ಸಂಶೋಧನೆ ಎಂಬುದು ಆಯ್ಕೆಯಲ್ಲ, ಅದು ಜವಾಬ್ದಾರಿ. ನಿಖರವಾದ ಅಂಕಿ, ಅಂಶಗಳೊಂದಿಗೆ ವಿಶ್ಲೇಷಣೆ ಮಾಡಬೇಕು. ಸಾಂಪ್ರದಾಯಿಕ ಹಾಗೂ ಆಧುನಿಕ ವೈದ್ಯ
ಪದ್ಧತಿಯ ಸಮ್ಮಿಲನವಾಗಿ, ಜಾಗತಿಕ ಮಟ್ಟಕ್ಕೆ ತಲುಪಬೇಕು ಎಂದರು.
ಯೋಗ, ಪ್ರಾಣಾಯಾಮ ಜೀವನ ವಿಧಾನವಾಗಿದ್ದು, ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯು ಸರ್ಕಾರಿ ಆಯುರ್ವೇದ ಸಂಶೋಧನಾ ಸಂಸ್ಥೆಯೊಂದಿಗೆ ಈ ಸಂಬಂಧ ಒಡಂಬಡಿಕೆ ಮಾಡಿಕೊಂಡಿದೆ ಎಂದರು.
ರಾಜೀವಗಾಂಧಿ ಆರೋಗ್ಯ ವಿವಿ ನಿರ್ದೇಶಕ ಡಾ.ರಾಮಚಂದ್ರಶೆಟ್ಟಿ ಮಾತನಾಡಿ, ಅಲೋಪಥಿ ಮತ್ತು ಆಯುರ್ವೇದ ಸೇರಿದಂತೆ ಸಂಶೋಧನೆ ಮಾಡುವವರಿಗೆ ವಿವಿ ಆರ್ಥಿಕ ನೆರವು ನೀಡಲಿದೆ. ಆದ್ದರಿಂದ ಇವತ್ತಿನಿಂದಲೇ ಸಂಶೋಧನಾ ಯಜ್ಞದ ಬಗ್ಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀವತ್ಸ, ಆದಿಚುಂಚನಗಿರಿ ವಿವಿಯ ವಿಶ್ರಾಂತ ಕುಲಪತಿ ಡಾ.ಎಂ.ಎ.ಶೇಖರ್, ಆಯುಷ್ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ಎಸ್.ಜಿ. ಮಂಗಳಗಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ ಇತರರಿದ್ದರು.