ಹೋಬಳಿಗೊಂದು ಕೆಂಪೇಗೌಡರ ಭವನ ಅವಶ್ಯ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಶ್ರೀ ಕೆಂಪೇಗೌಡ ಜಯಂತಿ ಸಮಿತಿಯಿಂದ ನಗರದ ಕರ್ನಾಟಕ ಕಲಾಮಂದಿರದಲ್ಲಿ ಶನಿವಾರ ಕೆಂಪೇಗೌಡರ ಜಯಂತಿ ನಡೆಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಶ್ರೀ ಕೆಂಪೇಗೌಡ ಜಯಂತಿ ಸಮಿತಿಯಿಂದ ನಗರದ ಕರ್ನಾಟಕ ಕಲಾಮಂದಿರದಲ್ಲಿ ಶನಿವಾರ ಕೆಂಪೇಗೌಡರ ಜಯಂತಿ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂ ಡಿಕೆಶಿಗೆ ಶಾಸಕ ಕೆ.ಹರೀಶ್‌ಗೌಡ ಮನವಿ
  • ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪುರಸ್ಕಾರ
ಗ್ರಾಮೀಣ ಭಾಗದಲ್ಲಿನ ಒಕ್ಕಲಿಗ ಸಮುದಾಯದ ಬಡವರ ಮದುವೆಗೆ ಅನುಕೂಲವಾಗುವಂತೆ ಹೋಬಳಿಗೊಂದು ಕೆಂಪೇಗೌಡರ ಭವನ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಶ್ರೀ ಕೆಂಪೇಗೌಡ ಜಯಂತಿ ಸಮಿತಿಯಿಂದ ನಗರದ ಕರ್ನಾಟಕ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಎಲ್ಲಡೆ ಒಂದೊಂದು ಸಮುದಾಯಗಳಿಗೂ ಒಬ್ಬೊಬ್ಬ ಮಹಾನೀಯರ ಹೆಸರಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಒಕ್ಕಲಿಗ ಸಮುದಾಯ ಇನ್ನೂ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಹೀಗಾಗಿ ಅವರ ಅನುಕೂಲಕ್ಕಾಗಿ ಹೋಬಳಿ ಮಟ್ಟದಲ್ಲಿ ಕೆಂಪೇಗೌಡ ಸಮುದಾಯ ಭವನ ನಿರ್ವಾಣದ ಕುರಿತು ಚರ್ಚಿಸಲಾಗಿದೆ. ನಮ್ಮ ಸಮುದಾಯ ಗ್ರಾಮಾಂತರ ಭಾಗದಲ್ಲಿ ಬಡವರಿದ್ದಾರೆ. ಮದುವೆ ಮಾಡಲು ಕಷ್ಟವಾಗುತ್ತದೆ. ರಾಜ್ಯದಲ್ಲಿ ಒಕ್ಕಲಿಗರು ಇರುವ ಕಡೆ ಹೋಬಳಿ ಮಟ್ಟದಲ್ಲಿ ಕೆಂಪೇಗೌಡ ಭವನ ನಿರ್ಮಿಸಬೇಕು ಎಂದು ಮತ್ತೊಮ್ಮೆ ಒತ್ತಾಯ ಮಾಡುವುದಾಗಿ ತಿಳಿಸಿದರು.
ನಾಡಪ್ರಭು ಕೆಂಪೇಗೌಡರು ಎಲ್ಲ ಸಮುದಾಯದವರಿಗೂ ಒಂದೊಂದು ಬಡಾವಣೆ ನಿರ್ಮಿಸಿದರು. ಹಾಗಾಗಿ, ಕೆಂಪೇಗೌಡರು ರಾಜ್ಯದ ದಂತಕಥೆ ಎಂದರೆ ತಪ್ಪಾಗಲಾರದು. ಅವರು ಬೆಂಗಳೂರು ನಿರ್ಮಿಸಿದ್ದ ರೀತಿ ಇಂದಿನ ಸಮಾಜಕ್ಕೆ ಮಾದರಿ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು, ಎಲ್ಲರೂ ಒಂದಾಗುವಂತೆ ತಿಳಿಸಿದರು ಎಂದ ಅವರು, ಕಷ್ಟದಲ್ಲಿರುವ ಎಲ್ಲರಿಗೂ ಒಕ್ಕಲಿಗ ಸಮುದಾಯ ಮಿಡಿಯುತ್ತದೆ. ಅಂತಹ ಸಮುದಾಯದಲ್ಲಿ ಕೆಂಪೇಗೌಡರು ಇದ್ದರು. ನಾನು ಕೂಡ ಆ ಸಮುದಾಯದಲ್ಲಿ ಹುಟ್ಟಿರುವುದು ನನ್ನ ಪುಣ್ಯ ಎಂದರು.
10-12 ವರ್ಷಗಳ ಹಿಂದೆ ಶಾಸಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕೆಂಪೇಗೌಡರ ಜಯಂತಿ ಪ್ರಾರಂಭಿಸಿದೆವು. ಅದನ್ನು ಮನಗಂಡ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ನಂತರ ಕೆಂಪೇಗೌಡ ಜಯಂತಿಂುನ್ನು ಸರ್ಕಾರದಿಂದ ಆಚರಿಸಲು ಮುಂದಾದರು. ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಹೆಮ್ಮೆ. ಮುಖ್ಯಮಂತ್ರಿಗಳು ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆಗಳನ್ನು ನಡೆಸಿ ಆದ್ಧೂರಿ ಆಚರಣೆ ಕರೆ ನೀಡಿದರು. ಇದರಂತೆ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ಜಯಂತಿ ಆಚರಣೆ ನಡೆಯುತ್ತಿದೆ ಎಂದು ಹೇಳಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಬೆಂಗಳೂರು ನಗರದ ಭವಿಷ್ಯದ ಬೆಳವಣಿಗೆಯನ್ನು ಅಂದೇ ಊಹಿಸಿದ್ದ ಕೆಂಪೇಗೌಡರು, ನಗರದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಗೋಪುರಗಳನ್ನು (ಕಾವಲು ಗೇಟ್‌ಗಳನ್ನು) ನಿರ್ಮಿಸಿದ್ದರು. ಮುಂದೆ ಈ ಗಡಿಗಳನ್ನು ಮೀರಿ ನಗರ ಅಭಿವೃದ್ಧಿ ಹೊಂದುತ್ತದೆ ಎಂಬ ಅವರ ದೂರದೃಷ್ಟಿಯ ಕನಸು ಇಂದು ಸಾಕಾರಗೊಂಡಿದೆ ಎಂದು ಹೇಳಿದರು.
ನಾಡು ಕಂಡ ಅಪರೂಪದ ಪ್ರಭು ಕೆಂಪೇಗೌಡರ ಸಾಧನೆಗಳು ಹಾಗೂ ಅವರ ಜೀವನದ ಉದಾತ್ತ ಉದ್ದೇಶಗಳನ್ನು ಇಂದಿನ ತಲೆಮಾರಿನ ಮಕ್ಕಳಿಗೆ ತಲುಪಿಸುತ್ತಿರುವ ಸಂಘಟಕರ ಈ ಶ್ರದ್ಧೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಕೆಂಪೇಗೌಡರು ಕಟ್ಟಿದ ಈ ಐತಿಹಾಸಿಕ ನಾಡಿನಲ್ಲಿ ನಾವಿಂದು ಬದುಕುತ್ತಿರುವುದೇ ನಮ್ಮ ಹೆಮ್ಮೆ. ಅವರ ದಕ್ಷ ಆಡಳಿತ, ವಿಶಾಲ ದೂರದೃಷ್ಟಿ ಮತ್ತು ಜನಪರ ನೀತಿಗಳು ಇಂದಿನ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಿರಲಿ ಎಂದು ತಿಳಿಸಿದರು.
ಕುವೆಂಪುನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಹಾ.ವಾಸು ಬೋರೇಗೌಡ ಮಾತನಾಡಿ,
ಅಂದಿನ ಕಾಲದಲ್ಲೇ ಅವರು ಬೆಂಗಳೂರನ್ನು ವಾಣಿಜ್ಯ ಕೇಂದ್ರವನ್ನಾಗಿ ಮಾಡಲು ವಿಭಿನ್ನ ವೃತ್ತಿ ನಿರತರಿಗಾಗಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದರು. ಅದಕ್ಕೆ ಸಾಕ್ಷಿಯಾಗಿ ಇಂದಿಗೂ ನಮ್ಮ ಕಣ್ಣಮುಂದೆ ಚಿಕ್ಕಪೇಟೆ, ದೊಡ್ಡಪೇಟೆ, ಅಕ್ಕಿಪೇಟೆ, ಬಳೇಪೇಟೆ ಮತ್ತು ತರಗುಪೇಟೆಯಂತಹ ಪ್ರದೇಶಗಳು ಜೀವಂತವಾಗಿವೆ ಎಂದು ತಿಳಿಸಿದರು.
ಜಯಂತಿ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 36 ಜನರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ 400 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ರಘು ಕೌಟಿಲ್ಯ, ಜಂುಂತ್ಯುತ್ಸವ ಸಮಿತಿಂು ಅಧ್ಯಕ್ಷ ಪಿ.ಪ್ರಶಾಂತ ಗೌಡ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಬಿಜೆಪಿ ಮುಖಂಡ ಕವೀಶ್ ಗೌಡ, ವಾಜಿ ಶಾಸಕ ಎಲ್.ನಾಗೇಂದ್ರ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರೀಸ್ವಾಮಿ ಗೌಡ, ಕಾರ್ಯದರ್ಶಿ ಚೇತನ್ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಮಂಜೇಗೌಡ, ಕೆ.ಟಿ.ಶ್ರೀಧರ್, ಗಂಗಾಧರ್, ಮುಖಂಡರಾದ ಬೋರೇಗೌಡ, ಮೋಹನ ಕುವಾರ್ ಗೌಡ, ರಾಕೇಶ್ ಗೌಡ, ಪ್ರೇಮ ಶಂಕರೇಗೌಡ, ಗಿರೀಶ್ ಗೌಡ, ಸುಶೀಲ ನಂಜಪ್ಪ, ನಾಗರಾಜು, ಎ.ರವಿ, ರವಿ ರಾಜಕೀಯ ಇತರರಿದ್ದರು.
===============
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net