ಸಾಮಾಜಿಕ ಕ್ರಾಂತಿ ಮಾಡಿದ ಮಾನವತವಾದಿ

: ಪಿರಿಯಾಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯಾ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಹೊಲದಪ್ಪ, ಎಚ್.ಜಿ.ಪರಮೇಶ್, ಕೆಲ್ಲೂರು ನಾಗರಾಜು, ಕೃಷ್ಣೆಗೌಡ ಇತರರು ಇದ್ದಾರೆ.
: ಪಿರಿಯಾಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯಾ ಮಾತನಾಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಹೊಲದಪ್ಪ, ಎಚ್.ಜಿ.ಪರಮೇಶ್, ಕೆಲ್ಲೂರು ನಾಗರಾಜು, ಕೃಷ್ಣೆಗೌಡ ಇತರರು ಇದ್ದಾರೆ.
Published on
ಪಿರಿಯಾಪಟ್ಟಣ: ಸಾಮಾಜಿಕ ಅಸಮಾನತೆ ಮತ್ತು ಅಸ್ಪಶ್ಯತೆ ತೊಡೆದು ಹಾಕಲು ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನ ಮಾನವತವಾದಿ ಎಂದು ತಹಸೀಲ್ದಾರ್ ನಿಸರ್ಗಪ್ರಿಯಾ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮ ವಚನಗಳ ಮೂಲಕ ಬಸವಣ್ಣ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು, ಇವರ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಬಸವಣ್ಣನವರು ಲಿಂಗ ತಾರತಮ್ಯ, ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಟ ಮಾಡಿ ಇಂದು ವಿಶ್ವಗುರುವಾಗಿದ್ದಾರೆ. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಕಂದಾಚಾರ, ಗೊಡ್ಡು ಸಂಪ್ರದಾಯಗಳಲ್ಲಿನ ಶೋಷಣೆಯ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸುಧಾರಣೆಗಾಗಿ ಪ್ರತಿಬ್ಬರಲ್ಲಿಯೂ ಸಾಮಾಜಿಕ ಜಾಗೃತಿ ಮೂಡಿಸಲು ಬಸವಣ್ಣ ಸಾಕಷ್ಟು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಹೊಲದಪ್ಪ ಮಾತನಾಡಿ, ಬಸವಣ್ಣ ಅವರು 12ನೇ ಶತಮಾನದಲ್ಲಿ ಅಸ್ಪಶ್ಯತೆ ತೊಡೆದು ಹಾಕಲು ಹೋರಾಟ ಮಾಡಿ ಮೇರು ವ್ಯಕ್ತಿತ್ವ ಪ್ರದರ್ಶಿಸಿದರು. ದಾಸೋಹ ಪರಿಕಲ್ಪನೆ ದಾರ್ಶನಿಕರಾಗಿದ್ದಾರೆ ಎಂದರು. ಕಾಯಕ ನಿಷ್ಠೆ ಜಗತ್ತಿಗೆ ಪರಿಚಯಿಸಿ, ಅನುಭವ ಮಂಟಪ ಸ್ಥಾಪಿಸಿ, ಸ್ತ್ರೀಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಬಸವಣ್ಣ ಎಂದರು. ಕಾಯಕಕ್ಕೆ ತಕ್ಕಂತೆ ಇದ್ದ ಜಾತಿ ವ್ಯವಸ್ಥೆ ಖಂಡಿಸಿ ಈ ಅನಿಷ್ಟ ಪದ್ಧತಿಯನ್ನು ಸಮಾಜದಿಂದ ತೊಡೆದು ಹಾಕಲು ಅವಿರತವಾಗಿ ಪ್ರಯತ್ನಿಸಿದ ಬಸವಣ್ಣ ಎಲ್ಲರೊಂದಿಗೆ ಸಮಾನವಾದ ಬದುಕು ನಡೆಸಿ ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಶಕೀಲಾ ಭಾನು, ಪುರಸಭೆ ಮುಖ್ಯಾಧಿಕಾರಿ ಎಚ್.ಪಿ.ಮಧು, ಸಿಡಿಪಿಒ ವೀಣಾ, ಬಿಸಿಎಂ ಇಲಾಖೆ ಅಧಿಕಾರಿ ಕೃಷ್ಣೇಗೌಡ, ಮುಖಂಡರಾದ ಕೆಲ್ಲೂರು ನಾಗರಾಜು, ಎಚ್.ಜಿ.ಪರಮೇಶ್, ಮಂಜುನಾಥ್, ನಿರಂಜನ್, ಗಿರೀಶ್, ಪ್ರಭುದೇವ, ತೋಂಟಪ್ಪ, ಕುಮಾರಸ್ವಾಮಿ. ನಂಜುಂಡಸ್ವಾಮಿ, ಲತಾ, ಪರಮಶಿವಯ್ಯ, ದಿನೇಶ್, ಸೋಮಯ್ಯ, ಪ್ರಸಾದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net