ಮುಂಜಾನೆಯಿಂದಲೇ ಲವಲವಿಕೆಯಿಂದ ವಿವಿಧ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ಆಗಮಿಸಿ ಜನರು ಭಕ್ತಿಭಾವ ಮೆರೆದರು. ಅಲಂಕಾರಗೊಂಡ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ, ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು. ನಗರದ ಹೋಟೆಲ್, ಚಿತ್ರಮಂದಿರದ ಮುಂದೆ ಜನಸಂದಣಿ ದಟ್ಟವಾಗಿದ್ದರೆ, ಚಾಮುಂಡಿ ಬೆಟ್ಟದ ರಸ್ತೆ, ಅರಸು ರಸ್ತೆ, ಅರಮನೆ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.