ಅಧ್ಯಕ್ಷರಾಗಿ ಎ.ಗಜೇಂದ್ರ ಆಯ್ಕೆ

ತಿ.ನರಸೀಪುರ ಪಟ್ಟಣದ ಗುರುಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯಕಾರಿಣಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎಸ್.ಸಿ.ಶಿವಮೂರ್ತಿ, ನಾಗೇಶ್, ಎಂ.ವಿ.ಶಿವಶಂಕರಮೂರ್ತಿ, ಸೋಸಲೆ ನಾಗೇಶ, ಟಿ.ಎಸ್.ಸುಬ್ಬಣ್ಣ, ಕುಪ್ಯ ಪುಟ್ಟಸ್ವಾಮಿ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಗುರುಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯಕಾರಿಣಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎಸ್.ಸಿ.ಶಿವಮೂರ್ತಿ, ನಾಗೇಶ್, ಎಂ.ವಿ.ಶಿವಶಂಕರಮೂರ್ತಿ, ಸೋಸಲೆ ನಾಗೇಶ, ಟಿ.ಎಸ್.ಸುಬ್ಬಣ್ಣ, ಕುಪ್ಯ ಪುಟ್ಟಸ್ವಾಮಿ ಇತರರು ಇದ್ದರು.
Published on
ತಿ.ನರಸೀಪುರ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆಯ ನೂತನ ಅಧ್ಯಕ್ಷ ಎ.ಗಜೇಂದ್ರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎನ್.ರೇವಣ್ಣ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆಯ 2026-31ನೇ ಅವಧಿಯ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಉಪಾಧ್ಯಕ್ಷರಾಗಿ ಸಿ.ಮಹದೇವಸ್ವಾಮಿ, ಅಕ್ಕಮಹಾದೇವಿ, ಸಹ ಕಾರ್ಯದರ್ಶಿಗಳಾಗಿ ಸಿ.ಕಿಕ್ಕೇರಿ ಶೆಟ್ಟಿ, ಎಸ್.ನಂದಿನಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಿ.ಸುರೇಶ, ಎಂ.ವೈ.ಜೀನತ್ ಹಾಗೂ ಖಜಾಂಚಿ ಜಿ.ಸಿದ್ದಮ್ಮಲ್ಲಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ನೂತನ ಕಾರ್ಯಕಾರಿಣಿ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿ, ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ ಹಾಗೂ ಖಾಸಗಿ ಶಾಲೆಗಳು ಬೆಳವಣಿಗೆಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಜವಾಬ್ದಾರಿ ಶಿಕ್ಷಕರ ಸಂಘಟನೆಯ ಮೇಲಿದೆ. ತಾಲೂಕು ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳು ಜನಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿಶ್ವಾಸವನ್ನು ವೃದ್ಧಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ ಮಾತನಾಡಿ, ನೂತನ ಪದಾಧಿಕಾರಿಗಳು ಶಿಕ್ಷಕರ ಸಮಸ್ಯೆ ಬಗೆಹರಿಸಲು ಸದಾ ಸಿದ್ಧರಿರಬೇಕು. ನಮಗೆ ಮತ ನೀಡಿದಕ್ಕೆ ಶಿಕ್ಷಕರಲ್ಲಿ ಸಾರ್ಥಕ ಭಾವನೆ ಇರುತ್ತದೆ. ನೂತನ ಪದಾಧಿಕಾರಿಗಳು ಶಿಕ್ಷಕರ ಜ್ವಲಂತ ಸಮಸ್ಯೆ ಬಂದಾಗ ಜತೆಯಲ್ಲಿದ್ದು ಬಗೆಹರಿಸಬೇಕು. ನಿಮ್ಮ ಜತೆ ಸದಾಕಾಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇರಲಿದೆ ಎಂದರು.
ಶಿಕ್ಷಕರ ಸಂಘದ ನಿರ್ದೇಶಕರಾದ ಸುಬ್ರಹ್ಮಣ್ಯ, ಚಂದ್ರಕಲಾ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸೋಸಲೆ ನಾಗೇಶ್, ಬಿಆರ್‌ಸಿ ನಾಗೇಶ್, ಉತ್ತಂಬಳ್ಳಿ ನಾಗರಾಜ್, ಬಿಸಿಯೂಟ ಸಹಾಯಕ ನಿರ್ದೇಶಕ ಪುಟ್ಟಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಟಿ.ಎಸ್.ಸುಬ್ಬಣ್ಣ, ಮಾಜಿ ಪ್ರಧಾನ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ಸಿದ್ದರಾಜಪ್ಪ, ಪ್ರಕಾಶ್, ಶಿಕ್ಷಕರಾದ ಸಿದ್ದರಾಜು, ಕೆ.ಪಿ.ಮಹದೇವಸ್ವಾಮಿ, ದಾಕ್ಷಾಯಿಣಿ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net