ಸೂರ್ಯ ಮುಳುಗುವ ಹೊತ್ತಿನಲ್ಲಿ ಕಿಂದರಜೋಗಿ ವೇದಿಕೆಯಲ್ಲಿ ತಮಿಳುನಾಡಿನ ಸಾಂಪ್ರದಾಯಿಕ ಜಾನಪದ ನೃತ್ಯ ಗರಿ ಬಿಚ್ಚಿತ್ತು. ಸೇಲಂನ ಮುಪ್ಪಿಡತಿ ಸೂರ್ಯನ್ ತಂಡದವರು ಡಮ್ಮಿ ಹಾರ್ಸ್, ಕರಗಂ, ಕಾವಾಡಿ, ತಪ್ಪಲ್ಟಂ, ಒಯಿಲಟ್ಟಂ, ನ್ಯಾಂಡಿಮೇಳಂ ನೃತ್ಯವನ್ನು ಪ್ರಸ್ತುತಪಡಿಸಿದರು. ಹಾಸನದ ಕುಮಾರಯ್ಯ ತಂಡದವರ ‘ಚಿಟ್ ಮೇಳ’ ಸಹ ಗಮನ ಸೆಳೆಯಿತು. ನಾಟಕಗಳಲ್ಲಿ ಸಾಮಾಜಿಕ ನ್ಯಾಯ, ಸಮತೆ, ಸಹೋದರತೆಯ ಸಂದೇಶ ಸಾರಿದ ಅಂಬೇಡ್ಕರ್ ವಿಚಾರಧಾರೆ ಹರಿಯಿತು.