ಯುವ ನಾಯಕನಿಗೆ ದೊಡ್ಡ ಜವಾಬ್ದಾರಿ

ಬನ್ನೂರಿನ ಸಂತೆಮಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಎಂ.ಅಶ್ವಿನ್‌ಕುಮಾರ್ ಅವರನ್ನು ವೈ.ಎಸ್.ರಾಮಸ್ವಾಮಿ ಸನ್ಮಾನಿಸಿದರು. ಸಿಬಿ ಹುಂಡಿ ಚಿನ್ನಸ್ವಾಮಿ, ಚಿಕ್ಕಜವರಪ್ಪ, ಜೈಪಾಲ್‌ಭರಣಿ, ಮಹದೇವಸ್ವಾಮಿ, ಮೇಗಳಕೊಪ್ಪಲು ಜಯರಾಮು, ದೇವರಾಜು, ಬೀಡನಹಳ್ಳಿ ದೇವರಾಜು, ನಾರಾಯಣಸ್ವಾಮಿ, ಕುಂತನಳ್ಳಿ ದೇವರಾಜು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್ ಮೈಸೂರು ಜಿಲ್ಲಾ ಗ್ರಾಮಾಂತರ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ
  • ಜೆಡಿಎಸ್ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ
ಬನ್ನೂರು: ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್ ಜೆಡಿಎಸ್‌ನ ಶಿಸ್ತಿನ ಸಿಪಾಯಿಯಂತೆ ಕೆಲಸ ನಿರ್ವಹಿಸಿ ಇದೀಗ ಮೈಸೂರು ಜಿಲ್ಲಾ ಗ್ರಾಮಾಂತರ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಪಕ್ಷದ ಜೆಡಿಎಸ್ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ತಿಳಿಸಿದರು.
ಪಟ್ಟಣದ ಸಂತೆಮಾಳದಲ್ಲಿ ಜೆಡಿಎಸ್ ಬಳಗ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎಂ.ಅಶ್ವಿನ್‌ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಜಿ ಶಾಸಕರಲ್ಲಿರುವ ಪ್ರಾಮಾಣಿಕತೆ, ನಿಯತ್ತನ್ನು ನಂಬಿ ಯುವ ನಾಯಕನಿಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ ಎಂದರು.
ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿಬಿ ಹುಂಡಿ ಚಿನ್ನಸ್ವಾಮಿ, ಚಿಕ್ಕಜವರಪ್ಪ, ಜೈಪಾಲ್‌ಭರಣಿ, ತೊಟ್ಟವಾಡಿ ಮಹದೇವಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಉಪಾದ್ಯಕ್ಷ ಮೇಗಳಕೊಪ್ಪಲು ಜಯರಾಮು, ದೇವರಾಜು, ಬೀಡನಹಳ್ಳಿ ದೇವರಾಜು, ನಾರಾಯಣಸ್ವಾಮಿ, ಕುಂತನಳ್ಳಿ ದೇವರಾಜು, ಕಂಚನಹಳ್ಳಿ ಚಿಕ್ಕೀರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net