ಕೋಟೆ ಹುಣಸಗಳ್ಳಿಯಲ್ಲಿ ಕೆಂಪೇಗೌಡ ಜಯಂತಿ ಸಂಭ್ರಮ

ಬನ್ನೂರಿನ ಸಮೀಪದ ಕೋಟೆ ಹುಣಸಗಳ್ಳಿ ಗ್ರಾಮದ ಕೆಂಪೇಗೌಡ ಯುವಕರ ಸಂಘ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ರಾಮಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಕೋಟೆ ಹುಣಸಗಳ್ಳಿ ಗ್ರಾಮದ ಕೆಂಪೇಗೌಡ ಯುವಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Published on
ಬನ್ನೂರು: ಪಟ್ಟಣದ ಸಮೀಪದ ಕೋಟೆ ಹುಣಸಗಳ್ಳಿ ಗ್ರಾಮದಲ್ಲಿ ಕೆಂಪೇಗೌಡ ಯುವಕರ ಸಂಘ ವತಿಯಿಂದ 517ನೇ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಇತ್ತೀಚೆಗೆ ಅದ್ದೂರಿಯಾಗಿ ಆಚರಿಸಲಾಯಿತು.
ನಾಡಪ್ರಭು ಕೆಂಪೇಗೌಡ ಭಾವಚಿತ್ರವನ್ನು ಹೂವಿನಿಂದ ಅಲಂಕಾರ ಮಾಡಿ, ಗ್ರಾಮವನ್ನು ತಳಿರು ತೋರಣದಿಂದ ಸಿಂಗರಿಸಿ, ವಿದ್ಯುತ್‌ದೀಪಾಲಂಕಾರ ಮಾಡಲಾಗಿತ್ತು. ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ ಸಿಡಿಮದ್ದು ಸಿಡಿಸಿ, ಕೆಂಪೇಗೌಡರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೊಲೀಸ್ ಇಲಾಖೆಯ ರಾಮಸ್ವಾಮಿ ಮತ್ತು ಎಚ್.ಆರ್.ರಘು ಅವರನ್ನು ಸಂಘದ ಸದಸ್ಯರು ಸನ್ಮಾನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net