ಮೈಸೂರು: ಟಿಕ್‌ಗೆಟ್ಸ್ ಸಂಸ್ಥೆಯ ವತಿಯಿಂದ ಏಪ್ರಿಲ್ 12ರಂದು ಬೆಳಗ್ಗೆ 6 ಗಂಟೆಗೆ 5 ಕಿಮೀ ಮ್ಯಾರಥಾನ್‌ಗೆ ಚಾಲನೆ ಕಾರ್ಯಕ್ರಮವನ್ನು ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗ ನೀಡಿದೆ. ‘ಒಂದು ಭೂಮಿ: ಒಂದು ಹೃದಯ’ ಮತ್ತು ಆರೋಗ್ಯಕರ ಹೃದಯವು ಹೆಚ್ಚು ಶಾಂತಿಯುತ ಜಗತ್ತನ್ನು ಸೃಷ್ಟಿಸುತ್ತದೆ ಎಂಬ ಆಶಯದೊಂದಿಗೆ ಈ ಓಟವನ್ನು ಏರ್ಪಡಿಸಲಾಗಿದೆ.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಸೇರಿದಂತೆ ಇತರರು ಗಣ್ಯರು ಪಾಲ್ಗೊಳ್ಳಲಿದ್ದು, ಅಂದಾಜು ಒಂದು ಸಾವಿರ ಸಾರ್ವಜನಿಕರು ಭಾಗಿಯಾಗುವ ನಿರೀಕ್ಷೆ ಇದೆ.
ಯುವಪೀಳಿಗೆಯು ನಮ್ಮ ಭವಿಷ್ಯಕ್ಕಾಗಿ ಮಾತ್ರವಲ್ಲದೆ, ಸಮಾಜ, ಆರೋಗ್ಯ ಮತ್ತು ಏಕತೆಗಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಧೂಮಪಾನವನ್ನು ತ್ಯಜಿಸಿ, ಆರೋಗ್ಯ ಮತ್ತು ಶಾಂತಿ ಕಾಯ್ದುಕೊಳ್ಳಬೇಕು. ಆರೋಗ್ಯ, ಕ್ರೀಡೆ ಮತ್ತು ಏಕತೆ ಮುಖ್ಯ. ಜನರು ಒಟ್ಟಿಗೆ ಓಡಿದಾಗ, ಅವರು ಸಂಪರ್ಕ ಸಾಧಿಸುತ್ತಾರೆ,
ಒಟ್ಟಿಗೆ ಆಡಿದಾಗ ಅವರು ಒಂದಾಗುತ್ತಾರೆ. ಇದರೊಂದಿಗೆ ಬಲವಾದ ಸಮಾಜ ನಿರ್ಮಾಣವಾಗುತ್ತದೆ. ಇಂತಹ ವಿಶಾಲ ದೃಷ್ಟಿಕೋನದಡಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಅರುಣ್ ತಿಳಿಸಿದ್ದಾರೆ.
ಓಟ ಸ್ಪರ್ಧಾ ಕಾರ್ಯಕ್ರಮದ ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಠಿಠಿ://ಠಿಜ್ಚಿಜಛಿಠ್ಢಿ.್ಚಟಞ ವೆಬ್‌ಸೈಟ್‌ಗೆ ಭೇಟಿ ನೋಂದಣಿ ಮಾಡಿಕೊಳ್ಳಬಹುದು.