ಕೆ.ಆರ್.ನಗರ ಅಭಿವೃದ್ಧಿಗೆ 3.97 ಲಕ್ಷ ರೂ. ಉಳಿತಾಯ ಬಜೆಟ್

ಕೆ.ಆರ್.ನಗರ ಪುರಸಭೆ ಸಭೆಯಲ್ಲಿ ಪುರಸಭಾ ಆಡಳಿತಾಧಿಕಾರಿ ಹಾಗೂ ಹುಣಸೂರು ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ 2026-27ನೇ ಸಾಲಿನ ಉಳಿತಾಯ ಬಜೆಟ್ ಮಂಡಿಡಸಿದರು. ಪುರಸಭಾ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಇದ್ದರು.
ಕೆ.ಆರ್.ನಗರ ಪುರಸಭೆ ಸಭೆಯಲ್ಲಿ ಪುರಸಭಾ ಆಡಳಿತಾಧಿಕಾರಿ ಹಾಗೂ ಹುಣಸೂರು ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ 2026-27ನೇ ಸಾಲಿನ ಉಳಿತಾಯ ಬಜೆಟ್ ಮಂಡಿಡಸಿದರು. ಪುರಸಭಾ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಇದ್ದರು.
Published on
ಕೆ.ಆರ್.ನಗರ: ಕೆ.ಆರ್.ನಗರ ಪುರಸಭೆಯಲ್ಲಿ ಮಂಗಳವಾರ ಪುರಸಭಾ ಆಡಳಿತಾಧಿಕಾರಿ ಹಾಗೂ ಹುಣಸೂರು ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ 2026-27 ನೇ ಸಾಲಿನ ಅಂದಾಜು 3.97 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಪುರಸಭೆ ಸ್ವಂತ ಅಂದಾಜು ಆದಾಯ ಆಸ್ತಿ ತೆರಿಗೆಯಿಂದ ಆದಾಯ 4,20 ಕೋಟಿ ರೂ., ನೀರಿನ ತೆರಿಗೆ 90 ಲಕ್ಷ ರೂ., ಪುರಸಭೆ ಮಳಿಗೆ ಮತ್ತು ಐಡಿಎಸ್‌ಎಂಟಿ ಮಳಿಗೆ 18.75 ಲಕ್ಷ ರೂ., ಉದ್ದಿಮೆ ಪರವಾನಗಿ 22ಲಕ್ಷ ರೂ. ಹಾಗೂ ಇತತೆ ಮೂಲಗಳಿಂದ 1.10 ಕೋಟಿ ರೂ. ಸರ್ಕಾರದಿಂದ ಬರಬಹುದಾಂತಹ ಅಂದಾಜು ಅನುದಾನಗಳಲ್ಲಿ 15ನೇ ಹಣಕಾಸು ಅನುದಾನ 2 ಕೋಟಿ, ಎಸ್‌ಎಫ್‌ಸಿ ಅನುದಾನ 28 ಲಕ್ಷ ರೂ., ಎಸ್‌ಎಫ್‌ಸಿ ವಿದ್ಯುತ್ ಶಕ್ತಿ ಅನುದಾನ 2.55 ಕೋಟಿ ರೂ., ಎಸ್‌ಎಫ್‌ಸಿ ವೇತನ ಅನುದಾನ 2.92 ಕೋಟಿ ರೂ., ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ 7 ಲಕ್ಷ ರೂ. ಆದಾಯ ನಿರೀಕ್ಷೆ ಮಾಡಿರುವುದಾಗಿ ತಿಳಿಸಿದರು.
ಪುರಸಭೆಯಿಂದ ಭರಿಸಬೇಕಾದ ಅಂದಾಜು ಖರ್ಚುಗಳಲ್ಲಿ ಪುರಸಭೆ ಕಚೇರಿಯ ನಿರ್ವಾಹಣೆ ವೆಚ್ಚ 30 ಲಕ್ಷ ರೂ., ಕಟ್ಟಡಗಳು, ರಸ್ತೆಗಳು, ಚರಂಡಿಗಳು, ಕಲ್ವರ್ಟ್‌ಗಳು, ಮ್ಯಾನ್ ಹೋಲ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ 35 ಲಕ್ಷ ರೂ., ಬೀದಿ ದೀಪ ನಿರ್ವಹಣೆಗೆ 30 ಲಕ್ಷ ರೂ., ವಾಹನಗಳ ಇಂಧನ ಹಾಗೂ ದುರಸ್ತಿ ಮತ್ತು ನಿರ್ವಹಣೆ 28 ಲಕ್ಷ ರೂ., ಹೊರಗುತ್ತಿಗೆ ನೌಕರರ ವೇತನ 1 ಕೋಟಿ ರೂ., ಪತ್ರಕರ್ತರ ಆರೋಗ್ಯ ನಿಧಿಗೆ 2 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಚೇರಿಯ ಯಂತ್ರೋಪಕರಣ ಹಾಗೂ ಕಂಪ್ಯೂಟರ್‌ಗಳಿಗೆ 5 ಲಕ್ಷ ರೂ., ರಸ್ತೆಗಳ ನಿರ್ಮಾಣಕ್ಕೆ 50 ಲಕ್ಷ ರೂ., ಚಂರಂಡಿ, ಮಳೆ ನೀರು ಚರಂಡಿ ನಿರ್ಮಾಣಕ್ಕೆ 40 ಲಕ್ಷ ರೂ., ಸ್ಮಶಾನ ಅಭಿವೃದ್ಧಿಗೆ 25 ಲಕ್ಷ ರೂ., ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ 60 ಲಕ್ಷ ರೂ., ನೀರು ಸರಬರಾಜು ವಿಭಾಗಕ್ಕೆ 40 ಲಕ್ಷ ರೂ., ಯುಜಿಡಿ ಸಂಪರ್ಕ ಕಲ್ಪಿಸಲು 30 ಲಕ್ಷ ರೂ., ಕಟ್ಟಡ ನಿರ್ಮಾಣಕ್ಕೆ 40 ಲಕ್ಷ ರೂ., ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ನಿರ್ವಹಣೆಗೆ 18 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ನೀರು ಸರಬರಾಜು ವೆಚ್ಚಗಳಲ್ಲಿ ನೀರು ಸರಬರಾಜು ವಿಭಾಗದ ದುರಸ್ತಿ ಹಾಗೂ ನಿರ್ವಹಣೆಗೆ 30 ಲಕ್ಷ ರೂ., ನೀರು ಸರಬರಾಜು ವಿಭಾಗಕ್ಕೆ ಬೀಚಿಂಗ್ ಪೌಡರ್ ಹಾಗೂ ಅಲಮ್ ಸರಬರಾಜು ಮಾಡಲು 5 ಲಕ್ಷ ರೂ., ನೀರು ಸರಬರಾಜು ವಿಭಾಗಕ್ಕೆ ಪೈಪ್‌ಗಳ ಸರಬರಾಜು 10 ಲಕ್ಷ ರೂ., ಹೊರಗುತ್ತಿಗೆ ನೌಕರರ ವೇತನ ಪಾವತಿಗೆ 40 ಲಕ್ಷ ರೂ., ಯುಜಿಡಿ ನಿರ್ವಹಣೆಗೆ 10 ಲಕ್ಷ ರೂ.ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಜೆಟ್ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಆರೋಗ್ಯ ನಿರೀಕ್ಷಕರಾದ ಎಸ್.ಪಿ.ರಾಜೇಂದ್ರ, ಲೋಕೇಶ್, ಪರಿಸರ ಅಭಿಯಂತರ ಮಧುಸೂಧನ್, ಲೆಕ್ಕಾಧಿಕಾರಿ ಸ್ವಪ್ನಾ, ಸಿಬ್ಬಂದಿ ಗಣೇಶ್, ಮಹದೇವನಾಯಕ, ಕೆ.ಮಹದೇವ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net