ಆರೋಪಿಯನ್ನು ಸೋಮವಾರ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. 32 ವರ್ಷದ ಇರ್ಫಾನ್ ಪಾಷ 19ನೇ ನೇ ವಯಸ್ಸಿನಿಂದಲೇ ಮಾದಕ ವಸ್ತುಗಳ ಸಂಗ್ರಹ, ಸಾಗಾಟ, ಮಾರಾಟದಲ್ಲಿ ಭಾಗಿಯಾಗುತ್ತಿದ್ದಾನೆ. 2014ನೇ ಸಾಲಿನಿಂದ 2025ನೇ ಸಾಲಿನವರೆಗೆ ಈತನ ಮೇಲೆ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ದಾಖಲಾದ ಪ್ರಕರಣಗಳಲ್ಲಿ ಈತನಿಂದ ಒಟ್ಟು 28 ಕೆ.ಜಿ. ಗಾಂಜಾಅಮಾನತ್ತುವಡಿಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ 3 ಪ್ರಕರಣಗಳಲ್ಲಿ ಈತನಿಗೆ ನ್ಯಾಯಾಲಯದಿಂದ ಶಿಕ್ಷೆಯಾಗಿರುತ್ತದೆ ಎಂದರು.