ಹರ್ಷಿತ್‌ಮೂರ್ತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ತಂದೆ, ತಾಯಿ ಮನೆಗೆ ಬೀಗ ಹಾಕಿ ಶನಿವಾರ ತೆರಳಿದ್ದರು. ಭಾನುವಾರ ಸಂಜೆ ವಾಪಸ್ ಬಂದು ನೋಡಿದಾಗ ಯಾರೋ ಮನೆಯ ಮುಖ್ಯ ಬಾಗಿಲು ಮೀಟಿ ಒಳಹೋಗಿರುವುದು ಕಂಡು ಬಂದಿದೆ. ಬಳಿಕ ಬೀರು ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.