ಪ್ರತಿದಿನ ನಗರಾದ್ಯಂತ ವ್ಯಾಪಕ ತಪಾಸಣೆ ಕೈಗೊಳ್ಳುತ್ತಿದ್ದು ಗುರುವಾರ ದಿನವಿಡೀ 61 ಲಾಡ್ಜ್, 22 ಪಿಜಿ, 41 ಪಾರ್ಕ್ ಸೇರಿದಂತೆ ಹೊರವಲಯದ ಗೋಡೌನ್, ಒಂಟಿ ಮನೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾದಕ ವಸ್ತು ಸೇವನೆ ಕುರಿತಂತೆ 18 ಸಂಶಯಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಇಬ್ಬರು ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಇಬ್ಬರ ವಿರುದ್ಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.